You cannot copy content of this page.
. . .

ಪೊಲೀಸರ ಮೇಲೆ ಹಲ್ಲೆ; ವ್ಯಕ್ತಿ ಅರೆಸ್ಟ್

  ಬಾರ್‌ನಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದಾಗ ಬುದ್ಧಿ ಹೇಳಲು ಬಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  ಹುಣಸೂರು ನಗರದ ನಿವಾಸಿ ಮಹದೇವ್ ಕುಡಿದು ಹಲ್ಲೆ ಮಾಡಿ ಬಂಧನಕ್ಕೊಳಗಾದ ವ್ಯಕ್ತಿ. ಈತ ಹುಣಸೂರಿನ ಮಲ್ಲಿಕಾರ್ಜುನ ಬಾರ್‌ನಲ್ಲಿ ಕಂಠಪೂರ್ತಿ ಕುಡಿದು ಕ್ಯಾಶಿಯರ್‌ನೊಂದಿಗೆ ಜಗಳವಾಡಿ, ಹಲ್ಲೆ ಮಾಡಿದ್ದ. ಬಾರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
 ಈ ವೇಳೆ ಕರ್ತವ್ಯದಲ್ಲಿದ್ದ ಎಎಸ್‌ಐ ತಮ್ಮೇಗೌಡ ಬಾರ್ ಬಳಿ ತೆರಳಿ ಆರೋಪಿ ಮಹದೇವ್‍ ಗೆ ಬುದ್ಧಿ ಹೇಳಿದ್ದಾರೆ. ಈ ವೇಳೆ ಎಎಸ್‌ಐ ತಮ್ಮೇಗೌಡರನ್ನು ಎಳೆದಾಡಿ ಅವರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Leave a Reply

 

%d bloggers like this: