You cannot copy content of this page.
. . .

ಪುಲ್ವಾಮ ದಾಳಿಗೆ ಒಂದು ವರ್ಷ; ಹುತಾತ್ಮ ಗುರು ಸಮಾಧಿಗೆ ಪೂಜೆ ಸಲ್ಲಿಸಲು ಬಾರದ ಪತ್ನಿ

 ಜಮ್ಮು ಕಾಶ್ಮೀರದ ಪುಲ್ವಾಮದ ಅವಂತಿಪುರದಲ್ಲಿ ಉಗ್ರರು ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಸಿಆರ್ಪಿಎಫ್ 40 ಯೋಧರು ಹುತಾತ್ಮರಾಗಿದ್ದರು. ಈ ದುರಂತ ಘಟನೆ ಸಂಭವಿಸಿ ಇಂದಿಗೆ ಒಂದು ವರ್ಷ. ಈ ದಾಳಿಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆ ಮದ್ದೂರಿನ ಯೋಧ ಗುರು ಕೂಡ ಹುತಾತ್ಮರಾಗಿದ್ದರು.

ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯಲ್ಲಿ ಹುತಾತ್ಮ ಯೋಧ ಗುರು ಅವರ ಸ್ಮಾರಕ ಸಮಾಧಿಗೆ ಇಂದು ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ದೇಶಾಭಿಮಾನಿಗಳು ಗೌರವಾರ್ಪಣೆ ಮಾಡಿದರು. ಸ್ಮಾರಕ ಸಮಾಧಿಗೆ ತ್ರಿವರ್ಣ ಧ್ವಜ ಮಾದರಿಯಲ್ಲಿ ಹೂವಿನಿಂದ ಅಲಂಕಾರ ಮಾಡಿ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಈ ವೇಳೆ ಮಗನನ್ನು ನೆನೆದು ತಾಯಿ ಚಿಕ್ಕತಾಯಮ್ಮ ಕಣ್ಣೀರು ಹಾಕಿದರು. ತಾಯಿಯ ನೋವಿಗೆ ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಹೋದಾ ಗುರು ಪತ್ನಿ ಕಲಾವತಿ ವಾಪಸ್ಸಾಗಿಲ್ಲ

ಪುಲ್ವಾಮ ದಾಳಿಯಲ್ಲಿ ಗುರು ಹುತಾತ್ಮ ಆದ ನಂತರ ಕುಟುಂಬಸ್ಥರಿಗೆ ಸರ್ಕಾರ ಹಾಗೂ ದಾನಿಗಳಿಂದ ಹಣದ ನೆರವು ಬಂದಿತ್ತು. ಹಣದ ವಿಚಾರವಾಗಿ ಗುರು ಪತ್ನಿ ಹಾಗೂ ಗುರು ಪೋಷಕರ ನಡುವೆ ವೈಮನಸ್ಸು ಉಂಟಾಗಿತ್ತು.

‘ಗುರು ಹುತಾತ್ಮನಾಗಿ ಕೆಲವು ತಿಂಗಳು ಆದ ನಂತರ ಬೆಂಗಳೂರಿಗೆ ಹೋದ ಗುರು ಪತ್ನಿ ಕಲಾವತಿ ಈವರೆಗೂ ಮನೆಗೆ ವಾಪಸ್ಸಾಗಿಲ್ಲ. ಗುರು ಸಮಾಧಿಗೆ ಪೂಜೆ ಸಲ್ಲಿಸಲು ಕೂಡ ಬಂದಿಲ್ಲ. ನಾನು ನನ್ನ ಇನ್ನಿಬ್ಬರ ಮಕ್ಕಳಲ್ಲಿ ಗುರುವನ್ನು ಕಾಣುತ್ತಿದ್ದೇನೆ’ ಎಂದು ತಾಯಿ ಚಿಕ್ಕತಾಯಮ್ಮ ಪ್ರತಿಕ್ರಿಯಿಸಿದ್ದಾರೆ.

Leave a Reply

 

%d bloggers like this: