You cannot copy content of this page.
. . .

ಪರೀಕ್ಷೆಯಲ್ಲಿ ಅಕ್ರಮವೆಸಗಿದ ವಿದ್ಯಾರ್ಥಿಗಳಿಗೆ ಜೈಲು ಶಿಕ್ಷೆ

 ಮೈಸೂರು: ಪರೀಕ್ಷೆ ಬರೆಯುವಾಗ ಅಕ್ರಮವೆಸಗುವ ವೇಳೆ ಸಿಕ್ಕಿ ಬಿದ್ದಿದ್ದ ಇಬ್ಬರು ವಿದ್ಯಾರ್ಥಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 3ನೇ ಅಧಿಕ 1ನೇ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಮೂರು ವರ್ಷ ಜೈಲು ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

 ಕೆ.ಆರ್.ನಗರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಯೋಗೇಶ್ ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಮರದೂರು ಗ್ರಾಮದ ನಿವಾಸಿ ನಂದೀಶ್ ಶಿಕ್ಷೆಗೆ ಗುರಿಯಾದವರು.

 ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ 2009ರ ಜನವರಿಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೃತ್ತಿ ಪರೀಕ್ಷೆಯ ಕಾರ್ಯಾಗಾರ ಲೆಕ್ಕಚಾರ ಮತ್ತು ವಿಜ್ಞಾನ ಎಂಬ ವಿಷಯದ ಪರೀಕ್ಷೆಗೆ ನಂದೀಶ ಅವರು ಹಾಜರಾಗಿ ಪರೀಕ್ಷೆ ಬರೆಯಬೇಕಿತ್ತು. ಆದರೆ, ಈತನ ಬದಲಿಗೆ ನಕಲಿ ಅಭ್ಯರ್ಥಿಯಾದ ಯೋಗೇಶ್ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಕಾಲೇಜಿನ ಪ್ರಾಂಶುಪಾರ ಕೈಗೆ ಸಿಕ್ಕಿ ಬಿದಿದ್ದ.ಈ ಹಿನೆಲ್ಲೆಯಲ್ಲಿ ಪ್ರಾಂಶುಪಾಲರು ನಗರದ ಎನ್.ಆರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

 ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಕ ಎಂ.ರಾಜೇಂದ್ರ ವಾದ ಮಂಡಿಸಿದರು.      

 

%d bloggers like this: