You cannot copy content of this page.
. . .

ಪರಮೇಶ್ವರ್’ಗೆ ಮುತ್ತಿಗೆ: ನೀವು ಸಿಎಂ ಆಗುವುದಾದರೆ ಮತ..!

   ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ ನಾಯಕ ಜಿ.ಪರಮೇಶ್ವರ್‍ ಗೆ ಜನ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಬನ್ನಿಕುಪ್ಪೆ ಗ್ರಾಮದಲ್ಲಿ ಪರಮೇಶ್ವರ್‍ ಮತಯಾಚನೆ ಮಾಡುತ್ತಿರುವಾಗ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. ನಾವು ಮಂಜುನಾಥ್‍ ಗೆ ಏಕೆ ಮತ ಹಾಕಬೇಕು. ನೀವು ಸಿಎಂ ಆಗುವುದಾದರೆ ಮಾತ್ರ ಮತ ಹಾಕುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

  ನೀವು ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದಿರಿ. ಆದರೆ ನಿಮಗೆ ಯಾಕೆ ಸಿಎಂ ಸ್ಥಾನ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಉತ್ತರಿಸಿದ ಪರಮೇಶ್ವರ್‍, ನೀವು ಆಶೀರ್ವಾದ ಮಾಡಿದರೆ ಹೈಕಮಾಂಡ್‍ ನಿರ್ಧರಿಸುತ್ತದೆ ಎಂದು ಹೇಳಿದರು. ಆದರೆ ಗ್ರಾಮಸ್ಥರು ಪರಮೇಶ್ವರ್‍ ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದರು. ಕೊನೆಗೆ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಂದೆ ತೆರಳಿದರು.

 

%d bloggers like this: