You cannot copy content of this page.
. . .

ಆಯಾರಾಮ್.. ಗಯಾರಾಮ್..; ಪಕ್ಷಾಂತರ ನಿಷೇಧ ಕಾಯ್ದೆ ಬಂದಿದ್ದು ಹೇಗೆ..?

  ಆಯಾ ರಾಮ್‍.. ಗಯಾ ರಾಮ್‍… ಈ ಮಾತನ್ನು ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಅಂದಹಾಗೆ ಈ ಮಾತು ಬಳಕೆಗೆ ಬಂದಿದ್ದು 1967ರಲ್ಲಿ. ಆ ಸಮಯದಲ್ಲಿ ಹರ್ಯಾಣದಲ್ಲಿ ಶಾಸಕರಾಗಿದ್ದ ಗಯಾ ಲಾಲ್‍ ಎಂಬುವವರ ಚಂಚಲ ನಿರ್ಧಾರದಿಂದಾಗಿ ಈ ಮಾತು ಇಂದಿಗೂ ಬಳಕೆಯಾಗುತ್ತಾ ಬಂದಿದೆ. ಜೊತೆಗೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬರುವುದಕ್ಕೆ ಬುನಾದಿ ಹಾಕಿದ್ದೂ ಇದೇ ವಿಷಯ. ಶಾಸಕರಾಗಿದ್ದ ಗಯಾ ಲಾಲ್‍, ಒಂದೇ ದಿನದಲ್ಲಿ 3 ಪಕ್ಷಗಳನ್ನು ಬದಲಾಯಿಸಿದ್ದರು. ಇದರಿಂದಾಗಿ ಹರ್ಯಾಣದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಈ ಸಮಯದಲ್ಲೇ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಬಗ್ಗೆ ಚಿಂತನೆಗಳು ನಡೆದಿದ್ದವು.

  ಕಾಲಕ್ರಮೇಣ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಈ ಕಾರಣದಿಂದಾಗಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಡಗಳು ಹೆಚ್ಚಾದವು. ಹೀಗಾಗಿ  ರಾಜೀವ್‍ ಗಾಂಧಿ ಪ್ರಧಾನಿಯಾಗಿದ್ದಾಗ 1985ರ ಜನವರಿ 30ರಂದು ಸಂವಿಧಾನದ 10ನೇ ಶೆಡ್ಯೂಲಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ಈ ಕಾಯ್ದೆಗೆ 52 ತಿದ್ದುಪಡಿಗಳನ್ನು ಮಾಡಲಾಗಿದೆ. ವಾಜಪೇಯಿ ಸರ್ಕಾರದ ವೇಳೆಯಲ್ಲಿ ಅಂದರೆ 1990ರಲ್ಲಿ ಕಠಿಣ ಅಂಶಗಳನ್ನು ಸೇರಿಸಿ ತಿದ್ದುಪಡಿ ಮಾಡಿದ್ದರಿಂದಾಗಿ ಪಕ್ಷಾಂತರ ನಿಷೇಧ ಕಾಯ್ದೆಗೆ ಬಲ ಬಂದಿದೆ. ಆದರೆ ಈ ಕಾಯ್ದೆಯಲ್ಲಿ ಈಗಲೂ ಗೊಂದಲಗಳಿವೆ. ಪಕ್ಷಾಂತರ ಮಾಡಿದವರನ್ನು ಅನರ್ಹಗೊಳಿಸಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ ಎಷ್ಟು ದಿನ ಅನರ್ಹರಾಗಿರುತ್ತಾರೆ..? ಚುನಾವಣೆಗೆ ಸ್ಪರ್ಧಿಸಬಹುದೇ ಬೇಡವೇ ? ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

  ವಾಜಪೇಯಿ ಪ್ರಧಾನಿಯಾಗಿದ್ದ ಸಮಯದಲ್ಲಿ ಚುನಾವಣಾ ಸುಧಾರಣೆ ಕುರಿತಾಗಿ ದಿನೇಶ್‍ ಗೋಸ್ವಾಮಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯ ವರದಿಯನ್ನಾಧರಿಸಿ, ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಯಿತು.

ಯಾವಾಗ ಅನರ್ಹತೆ ಮಾಡಬಹುದು..?

  1. ಜನಪ್ರತಿನಿಧಿಗಳು ಸ್ವಇಚ್ಛೆಯಿಂದ ಪಕ್ಷ ತೊರೆದಾಗ
  2. ವಿಪ್‍ ಉಲ್ಲಂಘನೆ ಮಾಡಿದಾಗ
  3. ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡಾಗ
  4. ಪಕ್ಷ ಸೂಚನೆ ಧಿಕ್ಕರಿಸಿ ಬೇರೆ ಪಕ್ಷಕ್ಕೆ ಮತ ಹಾಕಿದಾಗ
  5. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ

              ಯಾವಾಗ ಕಾಯ್ದೆ ಅನ್ವಯಿಸುವುದಿಲ್ಲ..?


               1. ಪಕ್ಷವೊಂದರ 3ನೇ 2ರಷ್ಟು ಶಾಸಕರು                           ಪಕ್ಷಾಂತರವಾದಾಗ

  1. ಪಕ್ಷದ ಮುಖ್ಯಸ್ಥರಿಂದ ಪೂರ್ವಾನುಮತಿ ಪಡೆದು ಪಕ್ಷಾಂತರವಾದಾಗ
  2. ಇಡೀ ಪಕ್ಷವೇ ವಿಲೀನವಾದಾಗ

 

%d bloggers like this: