You cannot copy content of this page.
. . .

ನಿರ್ಭಯಾ ಪ್ರಕರಣ: ಫೆಬ್ರವರಿ 1ಕ್ಕೆ ಗಲ್ಲು ಫಿಕ್ಸ್

  ರಾಷ್ಟ್ರಪತಿ ರಾಮನಾಥ್‍ ಕೋವಿಂದ್‍ ಅವರು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಫಿಕ್ಸ್‍ ಆಗಿದೆ. ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ದೆಹಲಿ ಪಟಿಯಾಲ ಕೋರ್ಟ್‍ ಹೊಸ ಡೆತ್‍ ವಾರಂಟ್‍ ಹೊರಡಿಸಿದೆ.

  ಈ ಹಿಂದೆ ತೀರ್ಪು ನೀಡಿದ್ದ ಕೋರ್ಟ್‍ ಜನವರಿ 22 ರಂದು ಗಲ್ಲು ಶಿಕ್ಷೆ ಜಾರಿ ಮಾಡುವಂತೆ ಡೆತ್‍ ವಾರಂಟ್‍ ಜಾರಿ ಮಾಡಿತ್ತು. ಆದರೆ ನಾಲ್ವರು ಅಪರಾಧಿಗಳಲ್ಲೊಬ್ಬ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ ಕಾರಣ ಗಲ್ಲು ಜಾರಿ ಪ್ರಕ್ರಿಯೆಗಳು ವಿಳಂಬವಾಗಿದ್ದವು. ಇದೀಗ ಗಲ್ಲು ಜಾರಿಗೆ ಯಾವುದೇ ಆತಂಕಗಳಿಲ್ಲ. ಹೀಗಾಗಿ ಕೋರ್ಟ್‍ ಫೆಬ್ರವರಿ 1ರ ಬೆಳಗ್ಗೆ 6 ಗಂಟೆಗೆ ಗಲ್ಲು ಜಾರಿ ಮಾಡುವಂತೆ ಕೋರ್ಟ್‍ ಸೂಚನೆ ನೀಡಿದೆ.

 

%d bloggers like this: