You cannot copy content of this page.
. . .

ನಿಮ್ಮಂತೆ ರಾಸಲೀಲೆಗೆ ರೂಂ ಮಾಡಿಲ್ಲ; ವಿಶ್ವನಾಥ್ ಗೆ ಹೆಚ್ಡಿಕೆ ತಿರುಗೇಟು

   ನಿಮ್ಮಂತೆ ರಾಸಲೀಲೆ ನಡೆಸಲು ನಾನು ಹೋಟೆಲ್‍ ರೂಂ ಮಾಡಿರಲಿಲ್ಲ ಎಂದು ಅನರ್ಹ ಶಾಸಕ ಎಚ್‍.ವಿಶ್ವನಾಥ್‍ ಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಹುಣಸೂರಿನಲ್ಲಿ ಜೆಡಿಎಸ್‍ ಅಭ್ಯರ್ಥಿ ಪರ ಪ್ರಚಾರದ ಮೇಲೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ವಿಶ್ವನಾಥ್‍ ವಿರುದ್ಧ ವಾಗ್ದಾಳಿ ನಡೆಸಿದರು.

  ವಿಶ್ವನಾಥ್‍ ಅವರು ಎಷ್ಟು ಬಾರಿ ನಮ್ಮ ಮನೆಗೆ ಬಂದು ತಿಂಡಿ ಮಾಡಿಲ್ಲ ಹೇಳಿ. ಆದರೆ ಒಂದು ದಿನವಾದರೂ ಅವರು ನಮ್ಮ ಕ್ಷೇತ್ರದ ಕೆಲಸ ಮಾಡಿಕೊಡಿ ಎಂದು ಕೇಳಿದ್ದಾರಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದ ಮೇಲೆ ಹೋಟೆಲ್‍ ನಲ್ಲಿ ತಂಗಿದ್ದರು ಎಂದು ವಿಶ್ವನಾಥ್‍ ಆರೋಪ ಮಾಡಿದ್ದರು. ಇದಕ್ಕೆ ಕುಮಾರಸ್ವಾಮಿ ಈ ರೀತಿ ತಿರುಗೇಟು ನೀಡಿದ್ದಾರೆ. ನಾನು ಸರ್ಕಾರಿ ಮನೆ ಪಡೆಯಲಿಲ್ಲ. ಈ ಕಾರಣಕ್ಕೆ ಹೋಟೆಲ್‍ ನಲ್ಲಿ ತಂಗಿದ್ದೆ ಎಂದು ಸಮಜಾಯಿಷಿ ನೀಡಿದರು.

 

%d bloggers like this: