You cannot copy content of this page.
. . .

ನಾನು ಡಿಸಿಎಂ ಸ್ಥಾನ ಕೇಳಿದ್ದೇನಾ..?; ವಿಶ್ವನಾಥ್‍ ಪ್ರಶ್ನೆ

 ಬಿಜೆಪಿಗಾಗಿ ನಾನು ಕಳಂಕ ಹೊತ್ತಿದ್ದೇನೆ, ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.

ಯಶವಂತಪುರ ಶಾಸಕರಾದ ಎಸ್.ಟಿ ಸೋಮಶೇಖರ್ ಅವರು, ಯಾವುದೇ ಕಾರಣಕ್ಕೂ ಸೋತವರಿಗೆ ಮಂತ್ರಿ ಸ್ಥಾನ ಒತ್ತಡ ಹಾಕಲು ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಸೋತಿರುವ ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ನೀಡಿಲ್ವಾ? ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ? ಕೇಳ್ತಿರೋದು ಮಂತ್ರಿ ಸ್ಥಾನ ಮಾತ್ರ ಎಂದು ತಿರುಗೇಟು ನೀಡಿದರು.

ಸೋತ ಮೇಲೂ ಅರುಣ್ ಜೆಟ್ಲಿ ಅನುಭವ ಬಳಕೆ ಆಗಲಿಲ್ವಾ?. ಹಾಗಾಗಿ ನಾನು ಹಿರಿಯ. ಈ ಹಿಂದೆ ಸಾಕಷ್ಟು ಬಾರಿ ಮಂತ್ರಿಯಾಗಿ ಕೆಲಸದ ಮಾಡಿದ ನನ್ನ ಅನುಭವವನ್ನು ಬಳಕೆ ಮಾಡಿಕೊಳ್ಳಿ ಅಂತ ಕೇಳುತ್ತಿದ್ದೇನೆ ಅಷ್ಟೇ ಎಂದರು.

 

%d bloggers like this: