You cannot copy content of this page.
. . .

ನಾನು ಈಶ್ವರಪ್ಪ ವೆಜ್ಜು, ಸಿದ್ದರಾಮಯ್ಯ ಮಾತ್ರ ನಾನ್‌ವೆಜ್; ಅಡಗೂರು ಎಚ್.ವಿಶ್ವನಾಥ್

 ನಾನು ಹಾಗೂ ಈಶ್ವರಪ್ಪ ಭಾಷಣ ಮುಗಿಸಿ ವೆಜ್ ಊಟಕ್ಕೆ ಹೋಗುತ್ತೇವೆ. ಸಿದ್ದರಾಮಯ್ಯ ಈಗಲೂ ನಾನ್ ವೆಜಿಟೇರಿಯನ್ ಇದ್ದಾರೆ. ನಾನು ಈಶ್ವರಪ್ಪ ಅವರ ಸಹವಾಸ ಮಾಡಿ ಬಾಡು, ಬಳ್ಳೆ ಬಿಟ್ಟಿದ್ದೇನೆ. ಸಿದ್ದರಾಮಯ್ಯ ಈಗಲೂ ಬಾಡು, ಬಳ್ಳೆ ಅಭ್ಯಾಸ ಇಟ್ಟುಕೊಂಡಿದ್ದಾರೆ ಎಂದು ಅಡಗೂರು ಎಚ್‍.ವಿಶ್ವನಾಥ್‍ ತಮ್ಮ ಭೋಜನಾಪ್ರಿಯತೆ ಬಗ್ಗೆ ಗುಟ್ಟು ಬಿಚ್ಚಿಟ್ಟರು.

 ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್ ನಾಯಕಿ ಐಶ್ವರ್ಯ ಹಾವುಬತ್ತಿ ಮೀನು ಊಟ ಮಾಡಿಸಿದ್ದಾರೆ. ಹೀಗಾಗಿ, ಕೆ.ಆರ್.ನಗರದ ನಮ್ಮ ಮನೆಯಲ್ಲಿ ಊಟ ಮಾಡುತ್ತೇವೆ. ಸಿದ್ದರಾಮಯ್ಯ ಅವರನ್ನು ಈಶ್ವರಪ್ಪ ಹಾಗೂ ವಿಶ್ವನಾಥ್‍ ಬಿಟ್ಟು ಹೋದರು ಎಂದು ನೀವು ಭಾವಿಸಬಾರದು ಎಂದು ಸಭಿಕರಿಗೆ ಹಾಸ್ಯಮಯವಾಗಿ ಹೇಳಿದರು. ಆ ಮೂಲಕ ಸಭೆ ನಗೆಗಡಲಲ್ಲಿ ತೇಲುವಂತೆ ಮಾಡಿದರು.

ವಿಶ್ವನಾಥ್‍ ಮತ್ತು ನಾನು ಮರಿ ಕಡಿದು ಬಾಡೂಟ ಹಾಕಿಸಿದ್ದೆವು- ಸಿದ್ದರಾಮಯ್ಯ

ವಿಶ್ವನಾಥ್‍ ಮತ್ತು ನಾನು ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲೇ ಮರಿ ಕಡಿದು ಬಾಡೂಟ ಹಾಕಿಸಿದ್ದೆವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

 ನಾನು ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ. ನಾನು ಫೈನಲ್ ಇಯರ್‌ನಲ್ಲಿದ್ದಾಗ, ವಿಶ್ವನಾಥ್ ಫಸ್ಟ್ ಇಯರ್. ಇಬ್ಬರೂ ಸೇರಿ ಕಾಳಿದಾಸ ವಿದ್ಯಾರ್ಥಿ ಸಂಘ ಕಟ್ಟಿದ್ದೆವು. ಅದಕ್ಕೆ ನಾನು ಅಧ್ಯಕ್ಷ, ವಿಶ್ವನಾಥ್ ಪ್ರಧಾನ ಕಾರ್ಯದರ್ಶಿ ಆಗಿದ್ದೆವು. ಮೈಸೂರಿನಲ್ಲಿ ಓದುತ್ತಿದ್ದ ಕುರುಬ ಸಮುದಾಯದ ವಿದ್ಯಾರ್ಥಿಗಳ ಸರ್ವೆ ಮಾಡಿಸಲು ಉದ್ದೇಶಿಸಿದ್ದೆವು. ಒಂದು ದಿನ ಮರಿ‌ ಕಡಿದು ಬಾಡೂಟ ಮಾಡಿಸಿದ್ದೆವು. ವಿದ್ಯಾರ್ಥಿ ದಿಸೆಯಿಂದಲೇ ನಾವಿಬ್ಬರೂ ಒಟ್ಟಿಗೆ ಬೆಳೆದಿದ್ದೇವೆ ಎಂದು ನೆನಪಿಸಿಕೊಂಡರು.

 

%d bloggers like this: