You cannot copy content of this page.
. . .

ನಳಿನಿಗೆ ಜಾಮೀನು; ವಕೀಲರಿಗೆ ಕೃತಜ್ಞತೆ ಸಲ್ಲಿಸಿದ ಸಿ.ಎಸ್.ದ್ವಾರಕನಾಥ್

 ‘ಫ್ರೀ ಕಾಶ್ಮೀರ’ ಪ್ರಕರಣದಲ್ಲಿ ನಳಿನಿಗೆ ಜಾಮೀನು ದೊರಕಿಸಿಕೊಡುವ ನಿಟ್ಟಿನಲ್ಲಿ ವಾದ ಮಂಡಿಸಿದ ವಕೀಲರಿಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್‍ ಕೃತಜ್ಞತೆ ಸಲ್ಲಿಸಿದ್ದಾರೆ.

 ‘ಮೈಸೂರಿನ ನಳಿನಿ ಕೇಸಿನಲ್ಲಿ ಜಾಮೀನು ಸಿಕ್ಕಿದೆ. ಈ ಕೇಸಿನಲ್ಲಿ ನನ್ನೊಂದಿಗೆ ತೊಡಗಿಸಿಕೊಂಡ ಎಲ್ಲ ಜನಪರ ವಕೀಲರಿಗೂ, ವಾದ ಮಂಡಿಸಿದ ವಕೀಲ ಜಗದೀಶ್‍ ಅವರಿಗೂ ಕೃತಜ್ಞತೆಗಳು..’ ಎಂದು ದ್ವಾರಕನಾಥ್‍ ಅವರು ತಮ್ಮ ಫೇಸ್‍ಬುಕ್‍ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.

 

 ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪರ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್‍ ನೇತೃತ್ವದ ವಕೀಲರ ತಂಡ ಯುವತಿ ನಳಿನಿ ಪರ ವಕಾಲತ್ತು ವಹಿಸಲು ಮೈಸೂರಿಗೆ ಬಂದಿತ್ತು. ಬೆಂಗಳೂರಿನಿಂದ ಬಂದಿದ್ದ ವಕೀಲರ ತಂಡದ ನೇತೃತ್ವವನ್ನು ವಕೀಲ ಜಗದೀಶ್‍ ವಹಿಸಿಕೊಂಡಿದ್ದರು.

 

%d bloggers like this: