You cannot copy content of this page.
. . .

ತಿಮ್ಮಪ್ಪನಿಗೆ ಮುಡಿ ಕೊಟ್ಟ ಹ್ಯಾಟ್ರಿಕ್ ಹೀರೊ ಪತ್ನಿ

ಹ್ಯಾಟ್ರಿಕ್‍ ಹೀರೊ, ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್‍ ಇಂದು (ಶುಕ್ರವಾರ) ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು. ಬ್ಯಾಕ್‍ ಟು ಬ್ಯಾಕ್‍ ಸಿನಿಮಾ ಕೆಲಸಗಳಿಂದ ಬಿಡುವು ಪಡೆದ ಶಿವರಾಜ್‍ಕುಮಾರ್‍ ತಮ್ಮ ಪತ್ನಿ ಗೀತಾ ಅವರೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಗೀತಾ ಅವರು ತಿಮ್ಮಪ್ಪನಿಗೆ ಮುಡಿ ನೀಡಿದ್ದಾರೆ.

 ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ನಾವು ಯಾವಾಗಲೂ ತಿರುಪತಿಗೆ ಬರುತ್ತಿರುತ್ತೇವೆ. ದೇವಸ್ಥಾನಕ್ಕೆ ಬಂದು ಏಳು ವರ್ಷವಾಗಿತ್ತು. ದೇವರ ದರ್ಶನ ಚೆನ್ನಾಗಿ ನಡೆಯಿತು. ನನ್ನ ಪತ್ನಿ ದೇವರಿಗೆ ಎರಡನೇ ಬಾರಿ ಮುಡಿ ನೀಡಿದ್ದಾರೆ. ಇಲ್ಲಿಗೆ ಬಂದಿದ್ದು ಖುಷಿ ಆಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

 ಮುಂದಿನ ಸಿನಿಮಾಗಳ ಕುರಿತು ಪ್ರಶ್ನಿಸಿದಾಗ, ದ್ರೋಣಹಾಗೂಭಜರಂಗಿ-2’ ಚಿತ್ರ ಶೂಟಿಂಗ್ ನಡೆಯುತ್ತಿದೆ ಎಂದು ಶಿವಣ್ಣ ಹೇಳಿದ್ದಾರೆ.

 

%d bloggers like this: