You cannot copy content of this page.
. . .

ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ; ಎನ್.ಆರ್.ಕ್ಷೇತ್ರದಲ್ಲಿ ಬಿಗಿ ಭದ್ರತೆ

    ಶಾಸಕ ತನ್ವೀರ್‍ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರಿನ ಎನ್‍.ಆರ್‍.ವಿಧಾನಸಭಾ ಕ್ಷೇತ್ರದಲ್ಲಿ ಬಿಗಿ ಪೊಲೀಸ್‍ ಬಂದೋಬಸ್ತ್‍ ಏರ್ಪಡಿಸಲಾಗಿದೆ. ರಾತ್ರಿಯಿಂದಲೇ ಪೊಲೀಸರು ಕ್ಷೇತ್ರದ ಪ್ರಮುಖ ಪ್ರದೆಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಭದ್ರತೆಗಾಗಿ 3ಎಸಿಪಿ, 10 ಪಿಐ, 10 ಪಿಎಸ್ಐ, 16  ಎಎಸ್ಐ, 150 ಹೆಚ್ ಸಿ, ಪಿಸಿ, 4 ಸಿಎಆರ್ ತುಕಡಿ, ಒಂದು ಚಾಮುಂಡಿ ಕಮಾಂಡೋ, ಒಂದು ಪ್ಯಾಂಥರ್ಸ್ ಪಡೆ ನಿಯೋಜನೆ ಮಾಡಲಾಗಿದೆ.

    ಇನ್ನೊಂದೆಡೆ ತನ್ವೀರ್‍ ಸೇಠ್‍ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಲೂ ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆಸ್ಪತ್ರೆ ಬಳಿ ನೂರಾರು ಜನ ಜಮಾಯಿಸಿದ್ದಾರೆ. ಹಲವಾರು ಜನಪ್ರತಿನಿಧಿಗಳು, ನಾಯಕರು, ಪ್ರಮುಖರು ಕೂಡಾ ಆಸ್ಪತ್ರೆ ಬಳಿ ಧಾವಿಸುತ್ತಿದ್ದಾರೆ. ಆದರೆ ಭದ್ರತೆ ದೃಷ್ಟಿಯಿಂದ ಯಾರನ್ನೂ ಒಳಗೆ ಬಿಡುತ್ತಿಲ್ಲ. ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

 

%d bloggers like this: