You cannot copy content of this page.
. . .

ತನ್ವೀರ್ ಸೇಠ್ ಪ್ರಕರಣ; ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ

ಶಾಸಕ ತನ್ವೀರ್‍ ಸೇಠ್‍ ಮೇಲೆ ನಡೆದ ಕೊಲೆ ಯತ್ನ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ನಗರ  ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ. ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಮಾತನಾಡಿದ ಅವರು, ಕೊಲೆ ಯತ್ನಕ್ಕೆ ಯಾವುದಾದರೂ ಸಂಘಟನೆ, ವ್ಯವಸ್ಥಿತ ಪಿತೂರಿ ಅಥವಾ ಸುಪಾರಿ ನೀಡಿರಬಹುದೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಕಾರಣ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

  ಭಾನುವಾರ ರಾತ್ರಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ತನ್ವೀರ್‍ ಸೇಠ್‍ ಮೇಲೆ 26 ವರ್ಷ ಯುವಕ ಪಾಷಾ ಮಚ್ಚಿನಿಂದ ಕುತ್ತಿಗೆ ಹಲ್ಲೆ ಮಾಡಿದ್ದ. ಸದ್ಯ ತನ್ವೀರ್‍ ಸೇಠ್‍ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

 

 

%d bloggers like this: