You cannot copy content of this page.
. . .

ತನ್ವೀರ್ ಸೇಠ್ ಚೇತರಿಕೆ; ನರಗಳಿಗೆ ಹಾನಿಯಾಗಿಲ್ಲ..

   ಮಚ್ಚಿನಿಂದ ಮಾರಾಣಾಂತಿಕ ದಾಳಿಗೊಳಗಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್‍ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕುತ್ತಿಗೆಯ ನರ ಹಾಗೂ ಸ್ಪೈನಲ್‍ ಕಾರ್ಡ್‍ ಗೆ ಯಾವುದೇ ಹಾನಿಯಾಗಿಲ್ಲ ಎಂಬುದು ದೃಢಪಟ್ಟಿದೆ. ಸ್ಕ್ಯಾನಿಂಗ್‍ ವರದಿಯ ಪ್ರಕಾರ ತನ್ವೀರ್‍ ಸೇಠ್‍, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  ಕೆಲ ಸಮಯ ವೆಂಟಿಲೇಟರ್‍ ತೆಗೆದು ಪರೀಕ್ಷೆ ಮಾಡಲಾಗಿದೆ. ಶಾಸಕರು ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. ಹೀಗೆಯೇ ಚೇತರಿಕೆ ಕಂಡರೆ ಮಂಗಳವಾರ ಅಥವಾ ಬುಧವಾರ ವಾರ್ಡ್‍ಗೆ ಶಿಫ್ಟ್‍ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

%d bloggers like this: