You cannot copy content of this page.
. . .

ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ; FIRನಲ್ಲಿ ಏನಿದೆ..?

   ಭಾನುವಾರ ರಾತ್ರಿ ಶಾಸಕ ತನ್ವೀರ್‍ ಸೇಠ್‍ ಮೇಲೆ ಕೊಲೆ

ಯತ್ನ ಪ್ರಕರಣ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದುವರೆಗೆ ಐವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ದಾಖಲಾಗಿರುವ ಎಫ್‍ ಐ ಆರ್‍ ನಲ್ಲಿ ದಾಖಲಾಗಿರುವ ಮಾಹಿತಿ ಇಲ್ಲಿದೆ:

   FIR: ದಿನಾಂಕ;17.11.2019 ರಂದು ರಾತ್ರಿ ಬನ್ನಿ ಮಂಟಪದ ಆವರಣದಲ್ಲಿ ಸೈಯದ್‍ ಯೂನಸ್ ರವರ ಮಗನ ವಲೀಮಾ ಸಮಾರಂಭಕ್ಕೆ ನರಸಿಂಹರಾಜ ಕ್ಷೇತ್ರ ಶಾಸಕರಾದ ತನ್ವೀರ್‍ ಸೇಠ್ ರವರು ಹಾಜರಾಗಿ, ರಾತ್ರಿ 11.15 ಗಂಟೆ ಸಮಯದಲ್ಲಿ ಸಂಗೀತ ಕಾರ್ಯಕ್ರನ ನಡೆಯುತ್ತಿದ್ದ ಸ್ಟೇಜ್‍ ಮುಂಭಾಗದ ಸಾಲಿನಲ್ಲಿ ಕುಳಿತಿದ್ದಾಗ, ಫರಾನ್ ಬಿನ್‍ ಮಕ್ಬೂಲ್, ಗೌಸಿಯಾನಗರ, ಮೈಸೂರು. ಎಂಬುವವನು ಹರಿತವಾದ ಆಯುಧದಿಂದ ತನ್ವೀರ್ ಸೇಠ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಕುತ್ತಿಗೆಯ ಭಾಗಕ್ಕೆ ಇರಿದು ಪರಾರಿಯಾಗುತ್ತಿದ್ದಾಗ, ಸಮಾರಂಭದಲ್ಲಿ ನೆರೆದಿದ್ದ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ನಂತರ ಗಾಯಾಳು ತನ್ವೀರ್ ಸೇಠ್ ರವರನ್ನು ಪೊಲೀಸ್ ವಾಹನದಲ್ಲೇ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ತನ್ವೀರ್ ಸೇಠ್ ರವರನ್ನು ಕೊಲೆ ಮಾಡಲು ಬಂದಿದ್ದ ಫರಾನ್ ಎಂಬುವವರನ್ನು ಕೂಲಂಕಶವಾಗಿ ವಿಚಾರಣೆ ನಡೆಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರಥಮ ವರ್ತಮಾನ ವರದಿ.

 

%d bloggers like this: