You cannot copy content of this page.
. . .

‘ಟೈ’ಟ್ ಮ್ಯಾಚ್ ನಲ್ಲಿ ಭಾರತಕ್ಕೆ ‘ಸೂಪರ್’ ಜಯ; ಟಿ20 ಸರಣಿ ಗೆಲುವಿನ ಇತಿಹಾಸ

 ಹಿಟ್ ಮ್ಯಾನ್ ರೋಹಿತ್ ಶರ್ಮ ಅವರ ವೀರೋಚಿತ ಆಟದ ನೆರವಿನಿಂದ ಭಾರತ ತಂಡ ಸೂಪರ್ ಓವರ್ ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟಿ-20 ಸರಣಿ ಗೆದ್ದು ಇತಿಹಾಸ ಬರೆದಿದೆ.

 ಬುಧವಾರ ನಡೆದ ಮೂರನೇ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಇದರಿಂದ ಸೂಪರ್ ಓವರ್ ನಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಮತ್ತು ಗುಪ್ಟಿಲ್ 1 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ 17 ರನ್ ಗಳಿಸಿದರು. ಕಠಿಣ ಗುರಿ ಬೆಂಬತ್ತಿದ ಭಾರತಕ್ಕೆ ರೋಹಿತ್ ಶರ್ಮ ಕೊನೆಯ 2 ಎಸೆತದಲ್ಲಿ 2 ಸಿಕ್ಸರ್ ಬಾರಿಸಿ ರೋಚಕ ಗೆಲುವು ತಂದುಕೊಟ್ಟರು.

 ಇದಕ್ಕೂ ಮುನ್ನ ಭಾರತ ತಂಡವನ್ನು 20 ಓವರ್ ಗಳಲ್ಲಿ 5 ವಿಕೆಟ್ ಗೆ 179 ರನ್ ಗಳಿಗೆ ನಿಯಂತ್ರಿಸಿದ ನ್ಯೂಜಿಲೆಂಡ್ ತಂಡ ಕೂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 179 ರನ್ ಮಾತ್ರ ಗಳಿಸಲಷ್ಟೇ ಶಕ್ತವಾಯಿತು.

 ಏಕಾಂಗಿ ಹೋರಾಟ ನಡೆಸಿದ ನಾಯಕ ಕೇನ್ ವಿಲಿಯಮ್ಸನ್ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 95 ರನ್ ಬಾರಿಸಿ ಶತಕ ವಂಚಿತರಾದರು. ಅಪಾಯಕಾರಿಯಾಗಿದ್ದ ವಿಲಿಯಮ್ಸನ್ ಕೊನೆಯ ಓವರ್ ನ ಮೂರನೇ ಎಸೆತದಲ್ಲಿ ಔಟ್ ಮಾಡಿದರೆ, ಅಂತಿಮ ಎಸೆತದಲ್ಲಿ ರಾಸ್ ಟೇಲರ್ ವಿಕೆಟ್ ಪಡೆದು ಪಂದ್ಯ ರೋಚಕ ಟೈ ಆಗುವಂತೆ ನೋಡಿಕೊಂಡರು.

 

%d bloggers like this: