You cannot copy content of this page.
. . .

ಟೀಂ ಇಂಡಿಯಾ ಅಭಿಮಾನಿ ಅಜ್ಜಿ ಇನ್ನಿಲ್ಲ

 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ವ್ಯಾಪಕ ಸುದ್ದಿ ಮಾಡಿದ್ದ ಟೀಂ ಇಂಡಿಯಾ ಅಭಿಮಾನಿ ಅಜ್ಜಿ ಚಾರುಲತಾ ಪಟೇಲ್ ವಿಧಿವಶರಾಗಿದ್ದಾರೆ.

  87 ವರ್ಷದ ಚಾರುಲತಾ ಪಟೇಲ್ ಅವರು 2019ರ ವಿಶ್ವಕಪ್ ಪಂದ್ಯದ ವೇಳೆ ಉತ್ಸಾಹದಿಂದ ಪಾಲ್ಗೊಂಡು ಭಾರಿ ಜನಪ್ರಿಯತೆ ಪಡೆದಿದ್ದರು.  ಇವರು ಜನವರಿ 13ರಂದು ಮೃತರಾಗಿದ್ದಾರೆ ಎಂದು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

  ವಿಶ್ವಕಪ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದ್ದ ಅಜ್ಜಿ ಬಹಳ ಹುರುಪಿನಲ್ಲಿ ಪಾಲ್ಗೊಂಡಿದ್ದರು. ಟಿವಿ ಸ್ಕ್ರೀನ್ ನಲ್ಲಿ ಅಜ್ಜಿ ಕಾಣಿಸಿಕೊಳ್ಳುತ್ತಿದ್ದಂತೆ ಭಾರಿ ಪ್ರಸಿದ್ಧಿ ಪಡೆದಿದ್ದರು. ಚಾರುಲತಾ ಪಟೇಲ್ ಇಂಟರ್ನೆಟ್ ಸೆನ್ಸೇಶನ್ ಆಗಿದ್ದರು.  ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅಜ್ಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

 

%d bloggers like this: