ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉಪಚುನಾವಣೆಗೆ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಡಿ.9ರ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗುತ್ತೆ ಎಂದು ಹೇಳುತ್ತಿದ್ದರು. ಇದೀಗ ಕಾಂಗ್ರೆಸ್ ನಾಯಕರೂ ಕೂಡ ಇದೇ ದಾಟಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮವಾರ ಹುಣಸೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ, ಜೆಡಿಎಸ್ ಜೊತೆ ಮೈತ್ರಿ ಅನಿವಾರ್ಯ ಎಂದು ಹೇಳುವ ಮೂಲಕ ಚುನಾವಣೆ ನಂತರದ ಬೆಳವಣಿಗೆ ಕುರಿತು ಕುತೂಹಲ ಮೂಡಿಸಿದ್ದಾರೆ.
ಶತ್ರುಗಳ ಶತ್ರು ಯಾವಾಗಲೂ ಮಿತ್ರ ಆಗುತ್ತಾನೆ. ಬಿಜೆಪಿ ನಮ್ಮಿಬ್ಬರಿಗೂ ಶತ್ರುನೇ. ಹೀಗಾಗಿ, ಹಿಂದೆ ಆಗಿರುವ ತಪ್ಪನ್ನು ಮರೆತು ಕಾಂಗ್ರೆಸ್—ಜೆಡಿಎಸ್ ಒಂದಾಗಬೇಕಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.