You cannot copy content of this page.
. . .

ಜೆಎನ್‍ಯು ನಲ್ಲಿ ಘರ್ಷಣೆ; ಎಫ್‍ಐಆರ್‍ ದಾಖಲು

  ನವದೆಹಲಿಯ ಜವಹರ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಮೊದಲ ಎಫ್ ಐ ಆರ್ ದಾಖಲಾಗಿದೆ. ಭಾನುವಾರ  ರಾತ್ರಿ ಜೆಎನ್ ಯು ನಲ್ಲಿ ನಡೆದ ಘರ್ಷಣೆಯ ಕುರಿತು ನಾವು ಎಫ್ ಐಆರ್ ದಾಖಲಿಸಿದ್ದೇವೆ. ಸಾಮಾಜಿಕ ಜಾಲತಾಣಗಳು ಮತ್ತು ಸಿಸಿಟಿವಿ ಕ್ಯಾಮರಾಗಳ ವಿಡಿಯೋಗಳನ್ನು ಆಧರಿಸಿ ನಾವು ದೂರು ದಾಖಲಿಸಿದ್ದೇವೆ ಎಂದು ನೈರುತ್ಯ ದೆಹಲಿಯ ಡಿಸಿಪಿ ದೇವೆಂದ್ರ ಆರ್ಯ ಹೇಳಿದ್ದಾರೆ.

  ಭಾನುವಾರ ರಾತ್ರಿ ಜೆಎನ್ ಯು ಕ್ಯಾಂಪಸ್ ಒಳಗೆ ನುಗ್ಗಿದ್ದ ಹಲವು ಮುಸುಕುಧಾರಿಗಳು ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆಗೆ ಕ್ಯಾಂಪಸ್ ನ ಆಸ್ತಿ ಪಾಸ್ತಿಗೆ ಹಾನಿ ಮಾಡಲಾಗಿದೆ. ಘರ್ಷಣೆಯಲ್ಲಿ ಗಾಯಗೊಂಡಿದ್ದ ಸುಮಾರು 23 ವಿದ್ಯಾರ್ಥಿಗಳು ಇಂದು ಮುಂಜಾನೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

 

 

%d bloggers like this: