You cannot copy content of this page.
. . .

ಜೀಪ್-ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು

ಜೀಪ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಅಗ್ರಹಾರ ಗ್ರಾಮದ ವೈರಮುಡಿ ಪುತ್ರ ನಾಗರಾಜ್ (೨೨) ಮೃತಪಟ್ಟವರು. ನಗರದ ಬೈಪಾಸ್ ರಸ್ತೆಯ ಕೋರ್ಟ್ ವೃತ್ತದ ಬಳಿ ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಜೀಪ್ ಎದುರಿನಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಟ್ಟೆಮಳಲವಾಡಿ ಬಳಿಯ ಅಗ್ರಹಾರ ಗ್ರಾಮದ ವೈರಮುಡಿ ಪುತ್ರ ನಾಗರಾಜ್ ಸಾವನ್ನಪ್ಪಿದರೆ, ಹಿಂಬದಿಯ ಸವಾರನಿಗೆ ತೀವ್ರ ಪೆಟ್ಟು ಬಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 

%d bloggers like this: