You cannot copy content of this page.
. . .

ಜಾರ್ಖಂಡ್‍ನಲ್ಲೂ ಮೈತ್ರಿಗೆ ಕುತ್ತು; ಬಿಜೆಪಿ ಸಖ್ಯ ಬಿಟ್ಟ ಎಲ್‍ಜೆಪಿ

   ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಜಾರ್ಖಂಡ್‍ ರಾಜಕೀಯದ ಮೇಲೂ ಪ್ರಭಾವ ಬೀರಿದೆ. ರಾಮ್‍ ವಿಲಾಸ್‍ ಪಾಸ್ವಾನ್‍ ನೇತೃತ್ವದ ಎಲ್‍ಜೆಪಿ, ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಖ್ಯ ತೊರೆದಿದೆ. ಒಟ್ಟು 82 ಕ್ಷೇತ್ರಗಳ ಜಾರ್ಖಂಡ್‍ ವಿಧಾನಸಭೆಯಲ್ಲಿ 50 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಲ್‍ಜೆಪಿ ಮಹತ್ವದ ತೀರ್ಮಾನ ಕೈಗೊಂಡಿದೆ.

  ಕೇಂದ್ರ ಸರ್ಕಾರದಲ್ಲಿ ಎಲ್‍ಜೆಪಿ ನಾಯಕ ರಾಮ್‍ ವಿಲಾಸ್‍ ಪಾಸ್ವಾನ್‍ ಮಂತ್ರಿಯಾಗಿದ್ದಾರೆ. ಹೀಗಿದ್ದರೂ ಜಾರ್ಖಂಡ್‍ ರಾಜ್ಯದಲ್ಲಿ ಎಲ್‍ಜೆಪಿ ಪಕ್ಷ ಈ ತೀರ್ಮಾನ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಜಾರ್ಖಂಡ್‍ನಲ್ಲಿ ಬಿಜೆಪಿ, ಎಲ್‍ಜೆಪಿ ಹಾಗೂ ಜೆಡಿಎ ನೇತೃತ್ವದ ಸಮ್ಮಿಶ್ರ ಸರ್ಕಾರವಿದೆ. ಈಗಾಗಲೇ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡಾ ಮೈತ್ರಿಕೂಟದಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುವ ತೀರ್ಮಾನ ಕೈಗೊಂಡಿದೆ. ಜಾರ್ಖಂಡ್‍​ನಲ್ಲಿ ನವೆಂಬರ್​ 30 ರಿಂದ ಡಿಸೆಂಬರ್​ 20ರವರೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

 

%d bloggers like this: