You cannot copy content of this page.
. . .

ಚಾಕೊಲೇಟ್ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ..!

ಚಾಕೊಲೇಟ್‍ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಮೂಲದ ಅತೀಫ್ ಸಲೀಂ ಹಾಗೂ ರೋಹಿತ್‍ ಬಂಧಿತ ಆರೋಪಿಗಳು. ಬಂಧಿತರಿಂದ 1 ಕೋಟಿ ರೂಪಾಯಿ ಮೌಲ್ಯದ ಹಶೀಶ್ ಹಾಗೂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

  ಕೆನಡಾದಿಂದ ಆನ್‍ ಲೈನ್‍ ಮೂಲಕ ಡ್ರಗ್ಸ್‍ ತರಿಸಿಕೊಳ್ಳುತ್ತಿದ್ದ ಆರೋಪಿಗಳು, ಹಾಲಿನ ಪೌಡರ್‍ ಬಾಕ್ಸ್‍ ಗಳಲ್ಲಿ ಡ್ರಗ್ಸ್ ಡೆಲಿವರಿ ಮಾಡುತ್ತಿದ್ದರು. ಚಾಕ್‍ ಲೇಟ್‍ ರೂಪದಲ್ಲಿದ್ದದ್ದರಿಂದ ಪೊಲೀಸರಿಗೆ ಹಿಡಿಯಲಾಗಿರಲಿಲ್ಲ. ಡ್ರಗ್ಸ್ ಮಿಶ್ರಿತ ಒಂದು ಚಾಕೊಲೇಟ್‍ ಬೆಲೆ 1500 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.

 

%d bloggers like this: