You cannot copy content of this page.
. . .

‘ಚಕ್ರವರ್ತಿ’ಗೆ ಜನಸಾಮಾನ್ಯರ ಮಾತಿನ ‘ತಿವಿತ’..!

ಯುವ ಬ್ರಿಗೇಡ್‍ ನ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಇತ್ತೀಚೆಗೆ ಪದೇ ಪದೇ ಸಾಮಾಜಿಕ ಜಾಲತಾಣಿಗರಿಗೆ ಆಹಾರವಾಗುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಿದ್ದರ ಬಗ್ಗೆ ಮಾತನಾಡುತ್ತಾ ಅಮಿತ್‍ ಷಾರನ್ನು ಚಾಣಕ್ಯ ಅಲ್ಲ ಶಾಣಕ್ಯ ಎಂದು ಹೊಗಳಿದ್ದರು. ಅದಾದ 2 ದಿನದಲ್ಲೇ ಬಿಜೆಪಿ ಸರ್ಕಾರ ಉರುಳಿತ್ತು. ಆಗ ನೆಟ್ಟಿಗರು ಚಕ್ರವರ್ತಿ ಸೂಲಿಬೆಲೆ ಬಗ್ಗೆ ವ್ಯಂಗ್ಯವಾಡಿದ್ದರು. ಇದೀಗ ಹೈದರಾಬಾದ್‍ ನಲ್ಲಿ ನಡೆದ ಪಶು ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಲಿಬೆಲೆ ಮಾಡಿರುವ ಟ್ವೀಟ್‍, ನೆಟ್ಟಿಗರ ಸಿಟ್ಟನ್ನು ನೆತ್ತಿಗೇರಿಸಿದೆ.

    ಮೂರು ದಿನದ ಹಿಂದೆ ಹೈದರಾಬಾದ್‍ ನಲ್ಲಿ ನಡೆದ ಪಶು ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಮದ್‍ ಪಾಷಾ, ಶಿವ, ಕೇಶವುಲು ಹಾಗೂ ನವೀನ್ ಎಂಬುವವರೇ ಆರೋಪಿಗಳು. ಈ ನಾಲ್ವರೂ ಆರೋಪಿಗಳಿಗೆ ನೇಣು ಶಿಕ್ಷೆಯಾಗಬೇಕೆಂದು ಇಡೀ ದೇಶವೇ ಆಗ್ರಹಿಸುತ್ತಿದೆ. ಕೆಲವರು ಮಾತ್ರ ಈ ಪ್ರಕರಣಕ್ಕೆ ಕೋಮಿನ ಬಣ್ಣ ಹಚ್ಚುತ್ತಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಚಕ್ರವರ್ತಿ ಸೂಲಿಬೆಲೆ ಕೂಡಾ ಇದೇ ತರದ ಟ್ವೀಟ್‍ ಮಾಡಿ ಜನರಿಂದ ವಾಚಾಮಗೋಚರವಾಗಿ ಬೈಸಿಕೊಳ್ಳುತ್ತಿದ್ದಾರೆ.

   ಆರೋಪಿ ಮಹಮದ್‍ ಪಾಷಾ ಫೋಟೋ ಮಾತ್ರ ಟ್ವೀಟ್‍ ಮಾಡಿರುವ ಚಕ್ರವರ್ತಿ ಸೂಲಿಬೆಲೆ, MY NAME IS MUHAMMAD I AM A RAPIST ಎಂದು ಬರೆದಿದ್ದಾರೆ. ಜೊತೆಗೆ ಮಹಮದ್‍ ಪಾಷಾನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ. ಇತರ ಮೂವರು ಆರೋಪಿಗಳ ಬಗ್ಗೆ ಮಾತನಾಡದೇ ಕೇವಲ ಒಬ್ಬ ಆರೋಪಿಯ ಹೆಸರನ್ನು ಪ್ರಸ್ತಾಪ ಮಾಡಿರುವುದಕ್ಕೆ ನೆಟ್ಟಿಗರು ಸೂಲಿಬೆಲೆ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ.

  ಅನರ್ಹರು ಹೇಗೆ ಅನರ್ಹರೋ ಹಾಗೆ ಅತ್ಯಾಚಾರಿಗಳೆಲ್ಲೂ ಅತ್ಯಾಚಾರಿಗಳೇ. ಅವರಲ್ಲೇಕೆ ಜಾತಿ ಹುಡುಕುತ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಸೂಲಿಬೆಲೆ ಛೀಮಾರಿ ಹಾಕಿದ್ದಾರೆ.ಮಹಮದ್‍ ಪಾಷಾನನ್ನು ಮಾತ್ರ ಗಲ್ಲಿಗೇರಿಸಿ ಉಳಿದ ಮೂವರು ಚೂಲಿಬೆಲೆಯ ಸಹೋದರರು ಅವರನ್ನು ಬಿಟ್ಟು ಬಿಡಿ ಅಂತ ಒಬ್ಬರು ವ್ಯಂಗ್ಯವಾಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆಗೆ ಛೀಮಾರಿ ಹಾಕುತ್ತಿದ್ದಾರೆ.

 

%d bloggers like this: