You cannot copy content of this page.
. . .

ಖ್ಯಾತ ತೆಲುಗು ನಟ ಡಾ.ರಾಜಶೇಖರ್ ಕಾರು ಪಲ್ಟಿ..!

  ಖ್ಯಾತ ತೆಲುಗು ನಟ ಡಾ.ರಾಜಶೇಖರ್‍ ಪ್ರಯಾಣಿಸುತ್ತಿದ್ದ ಬೆಂಜ್‍ ಕಾರು ಪಲ್ಟಿ ಹೊಡೆದಿದೆ. ಹೈದರಾಬಾದ್‍’ನ ಔಟರ್‍ ರಿಂಗ್‍ರೋಡ್‍ ಬಳಿ ಈ ದುರ್ಘಟನೆ ನಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ನಟ ರಾಜಶೇಖರ್‍ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ.

 ಮಂಗಳವಾರ ವಿಜಯವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಡಾ.ರಾಜಶೇಖರ್‍ ಭಾಗವಹಿಸಿದ್ದರು. ನಂತರ ತಡರಾತ್ರಿಯಲ್ಲಿ ಒಬ್ಬರೇ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಮನೆ ತಲುಪಲು ಕೆಲವೇ ಕಿಲೋ ಮೀಟರ್‍ ದೂರವಿತ್ತು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಕಾರಿನಲ್ಲಿದ್ದ ಏರ್‍ ಬ್ಯಾಗ್‍ ತೆರೆದುಕೊಂಡಿದ್ದರಿಂದ ರಾಜಶೇಖರ್‍ ಬಚಾವಾಗಿದ್ದಾರೆ. ಅಪಘಾತವಾಗುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಕಾರಿನಲ್ಲಿದ್ದವರು ರಾಜಶೇಖರ್‍ ರನ್ನು ರಕ್ಷಿಸಿದ್ದಾರೆ.

  ರಾಜಶೇಖರ್‍ ಅವರೇ ಕಾರು ಓಡಿಸುತ್ತಿದ್ದು, ಅತಿವೇಗದ ಚಾಲನೆಯೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ.

 

%d bloggers like this: