. . .

ಕ್ಯಾನ್ಸರ್ ಮಾಯ ಮಾಡಿದ ‘ಡಿಯರ್ ಮಾಯಾ’..

24 Views

  ಕ್ಯಾನ್ಸರ್‍ ಅಂದ್ರೆ ಜೀವಾವಧಿ ಶಿಕ್ಷೆ ಅಂತ ಎಲ್ಲರೂ ಭಾವಿಸಿದ್ದಾರೆ. ಆದರೆ ಕ್ಯಾನ್ಸರ್ ಗೇ ಜೀವಾವಧಿ ಶಿಕ್ಷೆ ಕೊಟ್ಟವರ ಸ್ಟೋರಿ ಇದು.. ಈ ಹಿಂದೆ ಯುವರಾಜ್‍ ಸಿಂಗ್‍ ಆರು ಬಾಲ್‍ ಗೆ ಆರು ಸಿಕ್ಸರ್‍ ಬಾರಿಸಿ ಬೌಲರ್‍ ಬೆವರಿಳಿಸಿದಂತೆ, ಕ್ಯಾನ್ಸರ್‍ ನ ಕೂಡಾ ದಿಕ್ಕಾಪಾಲಾಗಿ ಓಡಿಸಿದ್ದರು. ಇದೀಗ ಬಾಲಿವುಡ್‍ ಸುಂದರಿ ಮನಿಷಾ ಕೊಲಿಯಾರಾಲ ಕೂಡಾ ಕ್ಯಾನ್ಸರ್‍ ಅನ್ನೋ ಮಾರಿಗೆ ಗೇಟ್‍ ಪಾಸ್‍ ಕೊಟ್ಟಿದ್ದಾರೆ.

  ಯುವರಾಜ್‍ ಸಿಂಗ್‍ ಗೆ ಕ್ಯಾನ್ಸರ್‍ ಓಡಿಸೋದು ಸಿಕ್ಸರ್‍ ಹೊಡೆದಷ್ಟೇ ಸುಲಭ, ಮನಿಷಾ ಕೊಯಿರಾಲಾಗೆ ಥಕಥೈ ಅಂತ ನೃತ್ಯ ಮಾಡಿದಷ್ಟೇ ಈಜಿಯಾಗಿರುವಾಗ ಕ್ಯಾನ್ಸರ್‍ ಅಂದ್ರೆ ಭಯಪಡಬೇಕಾದ ಅವಶ್ಯಕತೆಯೇ ಇಲ್ಲ. ಆತ್ಮಸ್ಥೈರ್ಯವೊಂದಿದ್ದರೆ ಸಾಕು, ಕ್ಯಾನ್ಸರ್‍ ಅಲ್ಲ ಅದರಪ್ಪ ಬಂದರೂ ಒದ್ದು ಓಡಿಸಿಬಿಡಬಹುದು.

  ಹೌದು, ಮನಿಷಾ ಕೊಯಿರಾಲಾ ಸಿನಿಮಾಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಕೋಟ್ಯಂತರ ಜನರನ್ನು ರಂಜಿಸುತ್ತಿರುವ ಸಮಯದಲ್ಲೇ ಕ್ಯಾನ್ಸರ್‍ ಮಹಾಮಾರಿ ವಕ್ಕರಿಸಿಕೊಂಡಿತ್ತು. 2012ರಲ್ಲಿ ಅವರಿಗೆ ಅಂಡಾಶಯ ಕ್ಯಾನ್ಸರ್‍ ಇದೆ ಅನ್ನೋದು ಗೊತ್ತಾಗಿತ್ತು. ಆದರೆ ಎಲ್ಲರಂತೆ ಅವರು ಧೃತಿಗೆಡಲಿಲ್ಲ. 7 ವರ್ಷಗಳಿಂದ ಕ್ಯಾನ್ಸರ್‍ ಜೊತೆ ಗುದ್ದಾಡಿ ಬದುಕಿ ಬಂದಿದ್ದಾರೆ. ಸಂಪೂರ್ಣವಾಗಿ ಗುಣಮುಖರಾಗಿ ಬಂದಿರುವ ಮನಿಷಾ ಕೊಯಿರಾಲಾ ಅವರು, ಆಸ್ಪತ್ರೆ ಬೆಡ್‍ ಮೇಲೆ ಮಲಗಿರುವ ಚಿತ್ರದ ಜೊತೆಗೆ ತಮ್ಮ ಇತ್ತೀಚಿನ ಫೋಟೋವನ್ನು ಟ್ವಿಟರ್‍ ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಲಕ್ಷಾಂತರ ಕ್ಯಾನ್ಸರ್‍ ರೋಗಿಗಳಿಗೆ ಹೊಸ ಚೈತನ್ಯ ತುಂಬಿದ್ದಾರೆ.

ಆಸ್ಪತ್ರೆಯಲ್ಲಿ ಬೆಡ್‍ ಮೇಲೆ ಮಲಗಿರುವ ಒಂದು ಚಿತ್ರ, ಹಿಮಪರ್ವತದಲ್ಲಿ ನಿಂತಿರುವ ಮತ್ತೊಂದು ಚಿತ್ರವಿರುವ ಫೋಟೋ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಫೋಟೋ ಜೊತೆಗೆ ಕೊಯಿರಾಲ ಹೀಗೆ ಬರೆದುಕೊಂಡಿದ್ದಾರೆ.

` ಬೆಳಗಿನ ಶುಭೋದಯ ಗೆಳೆಯರೆ.. ನನಗೆ ಜೀವನದಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ಆನಂದ ಹಾಗೂ ಆರೋಗ್ಯಕರ ಜೀವನ ನಡೆಸಲು ಇದೊಂದು ಉತ್ತಮ ಅವಕಾಶ’ .
ಮನಿಷಾ ಕೊಯಿರಾಲಾ
ಬಾಲಿವುಡ್‍ ನಟಿ

ನಟಿ ಮನಿಷಾ 2012ರಲ್ಲಿ ಕ್ಯಾನ್ಸರ್‍ ಗೆ ತುತ್ತಾದಾಗ ಅವರು, ಅಮೆರಿಕದಲ್ಲಿ ಚಿಕಿತ್ಸೆ ಪಡೆದರು. ವೈದ್ಯರು ಮುತುವರ್ಜಿ ವಹಿಸಿದ್ದರಿಂದಾಗಿ ಮನಿಷಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.  ಕ್ಯಾನ್ಸರ್‍ ಗೆದ್ದ ನಂತರ ಅವರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

`ಜೀವನದಲ್ಲಿ ಉಡುಗೊರೆಯಾಗಿ ಬಂದ ಕ್ಯಾನ್ಸರ್ ಗೆ ನಾನು ಧನ್ಯವಾದ ಹೇಳುತ್ತೇನೆ. ಇದರಿಂದ ನನ್ನ ದೃಷ್ಟಿಕೋನ ಸೂಕ್ಷ್ಮವಾಯಿತು. ಬುದ್ದಿ ಸ್ಪಷ್ಟವಾಯಿತು. ಕೋಪ-ದುಃಖ, ಚಿಂತೆ ಎಂಥಾ ಸಂದರ್ಭದಲ್ಲೂ ಹೆದರದೆ ಶಾಂತ ಸ್ವಭಾವದವಳಾಗಿ ಮುನ್ನಡೆಯುವ ಯಶಸ್ಸಿನ ಪಾಠ ಕಲಿತಿದ್ದೇನೆ’
ಮನಿಷಾ ಕೊಯಿರಾಲಾ
ಬಾಲಿವುಡ್‍ ನಟಿ

ಕ್ಯಾನ್ಸರ್‍ ಗೆದ್ದಿರುವುದು ಅಷ್ಟೇ. ಮೊದಲಿನಷ್ಟೇ ಉತ್ಸಾಹದಿಂದ ಮನಿಷಾ ಚಿತ್ರರಂಗಕ್ಕೂ ವಾಪಾಸ್‍ ಆಗಿದ್ದಾರೆ. ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಅದರಲ್ಲಿ ಡಿಯರ್‍ ಮಾಯಾ ಕೂಡಾ ಒಂದು. ಹೀಗೆ ಸೆಲೆಬ್ರಿಟಿಗಳು ಕ್ಯಾನ್ಸರ್‍ ಮಹಾಮಾರಿಯನ್ನು ಗೆದ್ದು ಬಂದ ಸುದ್ದಿಗಳು ಬಂದಾಗಲೆಲ್ಲಾ ಅವು ಇತರೆ ಕ್ಯಾನ್ಸರ್‍ ಪೀಡಿತರಿಗೆ ಚೈತನ್ಯ ತುಂಬುತ್ತವೆ. ಮನೋಸ್ಥೈರ್ಯವನ್ನು ನೀಡುತ್ತವೆ. ಕೊಯಿರಾಲಾ ಕೂಡಾ ಈ ಸುದ್ದಿಯ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

Leave a Reply

 

%d bloggers like this: