You cannot copy content of this page.
. . .

ಕೋರ್ಟ್‍ ಆವರಣದಲ್ಲಿ ನಳಿನಿ ಕೂಗಾಟ; ಮನೆಗೆ ಎಳೆದೊಯ್ದ ತಾಯಿ

 ವಕಾಲತ್ತು ಹಾಕದಿರಲು ಮೈಸೂರು ವಕೀಲರ ಸಂಘ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಫ್ರೀ ಕಾಶ್ಮೀರ ಭಿತ್ತಿಪತ್ರ ಹಿಡಿದು ಸುದ್ದಿಯಾಗಿದ್ದ ನಳಿನಿ ಕೋರ್ಟ್‍ ಮುಂದೆ ಹೈಡ್ರಾಮಾ ಮಾಡಿದ್ದಾರೆ. ನೋ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ ನಳಿನಿ, ಈ ವೇಳೆ ತನ್ನ ಪರ ವಕಾಲತ್ತು ವಹಿಸದಿರಲು ವಕೀಲರು ತೀರ್ಮಾನಿಸಿರುವ ವಿಚಾರ ತಿಳಿದು, ನೋ ಹ್ಯೂಮಾನಿಟಿ ಎಂದು ಕೂಗಾಡಿದ್ದಾರೆ.

  ನಂತರ ಮಾಧ್ಯಮಗಳ ಜತೆ ನಳಿನಿ ಮಾತನಾಡಲು ಮುಂದಾದರು. ಆದರೆ ಇದಕ್ಕೆ ನಳಿನಿ ತಾಯಿ ಅವಕಾಶ ನೀಡಲಿಲ್ಲ. ನಳಿನಿಯವರನ್ನು ಬಲವಂತವಾಗಿ ಅವರ ತಾಯಿ ಮನೆಗೆ ಎಳೆದೊಯ್ದರು.

 ಇತ್ತೀಚೆಗೆ ಜವಾಹರಲಾಲ್‍ ನೆಹರೂ ವಿವಿಯಲ್ಲಿ ದಾಂದಲೆ ವಿರೋಧಿಸಿ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಳಿನಿ ಫ್ರೀ ಕಾಶ್ಮೀರ ಎಂಬ ಬೋರ್ಡ್‍ ಹಿಡಿದಿದ್ದರು. ಹೀಗಾಗಿ ಅವರ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಕೇಸ್‍ ದಾಖಲಿಸಲಾಗಿತ್ತು.

Leave a Reply

 

%d bloggers like this: