You cannot copy content of this page.
. . .

ಕೊರೊನಾ ಮರಣ ಮೃದಂಗ; 12 ಗಂಟೆಯಲ್ಲಿ 24 ಜನರು ಬಲಿ

  ಕೊರೊನಾ  ವೈರಸ್‍ ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಕಳೆದ ರಾತ್ರಿ 12 ಗಂಟೆಯ ಅಂತರದಲ್ಲೇ ಚೀನಾದ ಹುಬೈ ಭಾಗದಲ್ಲಿ ಕೊರೊನಾ ಮಹಾಮಾರಿ 24 ಮಂದಿಯನ್ನು ಬೇಟೆಯಾಡಿದೆ. ಇದರಿಂದ ಚೀನಾದಲ್ಲಿ ಕೊರೊನಾ ವೈರಸ್‍ ಗೆ ಬಲಿಯಾದವರ ಸಂಖ್ಯೆ 106ಕ್ಕೇರಿದೆ.

  4000 ಕ್ಕೂ ಹೆಚ್ಚು ಜನರಿಗೆ ಈ ಮಾರಣಾಂತಿಕ ವೈರಸ್ ತಗುಲಿದೆ. ಹುಬೈ ಪ್ರಾಂತ್ಯದಲ್ಲಿ ಮಾರಣಾಂತಿಕ ವೈರಸ್ ದಾಳಿಗೆ ಒಳಗಾದ 1300ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಭಾರತದಲ್ಲೂ ಕೊರೊನಾ ತನ್ನ ಕರಾಳ ನರ್ತನ ಶುರು ಮಾಡುವ ಮುನ್ಸೂಚನೆ ಕೊಟ್ಟಿದೆ. ಕೇರಳದಲ್ಲಿ ನೂರು ಮಂದಿಯನ್ನು ನಿಗಾ ಸ್ಥಿತಿಯಲ್ಲಿಡಲಾಗಿದೆ. ಬೆಂಗಳೂರಿನಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ. ಹೈದರಾಬಾದ್‍ ನಲ್ಲಿ 4 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ರೋಗಿಗಳ ತಪಾಸಣೆ ನಡೆಸಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ವೈರಸ್ ಹಬ್ಬದಂತೆ ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಮಾಡಲಾಗಿದೆ.

 

%d bloggers like this: