You cannot copy content of this page.
. . .

ಕೊಡಗಿನಲ್ಲಿ ನಕಲಿ ಅಂಗವಿಕಲನ ಸೆರೆ

ಭಿಕ್ಷೆ ಬೇಡುತ್ತಿದ್ದ ನಕಲಿ ಅಂಗವಿಕಲನನ್ನು ಕೊಡಗಿನ ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.
ಅಂಕೋಲ ಮೂಲಕ ವಿನಯ್ ಎಂಬಾತನೇ ಸೆರೆಯಾದ ನಕಲಿ ಅಂಗವಿಕಲ. ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯಲ್ಲಿ ಈತ ಕಾಲು ಊನಗೊಂಡಿದೆ ಎಂದು ಸುಳ್ಳು ಹೇಳಿಕೊಂಡು ಜನರಲ್ಲಿ ಕರುಣೆ ಭಾವನೆ ಮೂಡಿಸಿ ಭಿಕ್ಷೆ ಬೇಡುತ್ತಿದ್ದ. ಈತನ ನಟನೆಯನ್ನು ಅರಿತ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

 

%d bloggers like this: