You cannot copy content of this page.
. . .

ಕೆ.ಆರ್.ಪೇಟೆ ಉಪಸಮರ: ಚೆನ್ನಮ್ಮರಿಂದ ಬಿ ಫಾರ್ಮ್ ಪಡೆದ ದೇವರಾಜು

     ಕೆ.ಆರ್‍.ಪೇಟೆಯ ಜೆಡಿಎಸ್‍ ಅಭ್ಯರ್ಥಿ ಬಿ.ಎಲ್‍.ದೇವರಾಜು, ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಂದ ಬಿ-ಫಾರ್ಮ್‍ ಪಡೆದು ಆಶೀರ್ವಾದ ಪಡೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಬಿ.ಎಲ್‍.ದೇವರಾಜುಗೆ ಜೆಡಿಎಸ್‍ ಟಿಕೆಟ್‍ ಘೋಷಿಸಲಾಗಿತ್ತು. ಇಂದು (ಸೋಮವಾರ) ಬೆಂಗಳೂರಿಗೆ ಆಗಮಿಸಿದ್ದ ದೇವರಾಜು, ಜೆಡಿಎಸ್‍ ವರಿಷ್ಠ ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಪತ್ನಿ ಚೆನ್ನಮ್ಮರ ಕೈಯಿಂದ ಬಿ-ಫಾರ್ಮ್‍ ಪಡೆದುಕೊಂಡರು.

   ಕೆ.ಆರ್‍.ಪೇಟೆಯಲ್ಲಿ ಜೆಡಿಎಸ್‍ನಿಂದ ಚುನಾಯಿತರಾಗಿದ್ದ ನಾರಾಯಣಗೌಡ, ಬಿಜೆಪಿಗೆ ಹಾರಿದ್ದರಿಂದಾಗಿ ಇಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ನಾರಾಯಣಗೌಡ ಹಾಗೂ ಕಾಂಗ್ರೆಸ್‍ನಿಂದ ಕೆ.ಬಿ.ಚಂದ್ರಶೇಖರ್‍ ಕಣದಲ್ಲಿದ್ದಾರೆ.

 

%d bloggers like this: