You cannot copy content of this page.
. . .

ಕೆ.ಆರ್.ನಗರದಲ್ಲಿ ಬೆಂಕಿ ಅವಘಡ; ಮತ್ತೊಂದು ಸಾವು

 ಮೈಸೂರು ಜಿಲ್ಲೆಯ ಕೆ.ಆರ್.ನಗರದ ಈಶ್ವರನಗರ ಬಡಾವಣೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೇಣುಕಾಸ್ವಾಮಿ ಚಿಕಿತ್ಸೆ ಫಲಕಾರಿಯಾಗದೇ ಇಂದು (ಶುಕ್ರವಾರ) ಸಾವನ್ನಪ್ಪಿದ್ದಾರೆ.

 ಗುರುವಾರ ಬೆಳಿಗ್ಗೆ ನೀರು ಒಲೆ ಹಚ್ಚುವ ವೇಳೆ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಒಂದೇ ಕುಟುಂಬದ ರೇಣುಕಾಸ್ವಾಮಿ (46), ಪತ್ನಿ ಪುಷ್ಪಲತಾ (35) ಹಾಗೂ ಇವರ ಪುತ್ರ ತೇಜಸ್ (14) ಅವರಿಗೆ ಸುಟ್ಟ ಗಾಯಗಳಾಗಿ ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಪುತ್ರ ತೇಜಸ್‍ ಗುರುವಾರವೇ ಕೊನೆಯುಸಿರೆಳೆದಿದ್ದರು.

 ಇಂದು ರೇಣುಕಾಸ್ವಾಮಿ ಅವರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪುಷ್ಪಲತಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ. ರೇಣುಕಾಸ್ವಾಮಿ ಅವರು ಮೈಸೂರಿನ ಸಿ..ಆರ್.‍ನಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Leave a Reply

 

%d bloggers like this: