You cannot copy content of this page.
. . .

ಕೆಲಸ ಕೊಡಿಸದಿದ್ದಕ್ಕೆ ತನ್ವೀರ್ ಸೇಠ್ ಮೇಲೆ ಮುಚ್ಚು ಬೀಸಿದನೇ..?

ಮೈಸೂರಿನಲ್ಲಿ ಭಾನುವಾರ ರಾತ್ರಿ ಮಚ್ಚಿನಿಂದ ತೀವ್ರ ಹಲ್ಲೆಗೊಳಗಾಗಿರುವ ಶಾಸಕ ತನ್ವೀರ್‍ ಸೇಠ್‍ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶಾಸಕ ತನ್ವೀರ್‍ ಸೇಠ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಪ್ರಮುಖ ನರಗಳು ಕಟ್‍ ಆಗಿದ್ದು, ಶಾಸಕರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನೊಂದೆಡೆ ಮಚ್ಚು ಬೀಸಿದ ಆರೋಪಿ ಫರಾನ್ ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಆತ ತನ್ವೀರ್‍ ಕೊಲೆ ಯತ್ನಕ್ಕೆ ಕಾರಣ ಮಾತ್ರ ಬಾಯಿಬಿಟ್ಟಿಲ್ಲ. ಆದರೆ  ಕೆಲಸ ಕೊಡಿಸುವುದಕ್ಕೆ ವಿಳಂಬ ಮಾಡಿದ್ದಕ್ಕೆ ಬೇಸತ್ತು ದಾಳಿ ಮಾಡಿದ್ದಾನೆಂದು ಮೂಲಗಳು ಹೇಳುತ್ತಿವೆ. ಆದರೆ ಪೊಲೀಸರು ಇದುವರೆಗೂ ಏನನ್ನೂ ಖಚಿತಪಡಿಸಿಲ್ಲ.

   ಮೈಸೂರಿನ ಬನ್ನಿಮಂಟಪದ ಬಾಲಭವನದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ತನ್ವೀರ್‍ ಸೇಠ್ ಪಾಲ್ಗೊಂಡಿದ್ದರು. ಈ ವೇಳೆ ಉದಯಗಿರಿ ನಿವಾಸಿ ಫರಾನ್, ಶಾಸಕ ತನ್ವೀರ್‍ ಸೇಠ್ ಕುತ್ತಿಗೆಗೆ ಮಚ್ಚು ಬೀಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸ್ಥಳದಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನರಸಿಂಹರಾಜ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ 307 ಸೆಕ್ಷನ್ ಅಡಿಯಲ್ಲಿ ಆರೋಪಿಯ ವಿಚಾರಣೆ ನಡೆಯುತ್ತಿದೆ.

   ಕೆಲ ಮೂಲಗಳು ಹೇಳುವ ಪ್ರಕಾರ ಆರೋಪಿ ಪಾಷಾ, ಕರಕುಶಲಕರ್ಮಿಯಾಗಿದ್ದ. ಈತ ಕೆಲಸ ಕೊಡಿಸುವಂತೆ ಹಲವಾರು ಬಾರಿ ಶಾಸಕ ತನ್ವೀರ್‍ ಸೇಠ್‍ ರನ್ನು ಭೇಟಿಯಾಗಿದ್ದನಂತೆ. ಆದರೆ ಕೆಲಸ ಕೊಡಿಸುವುದು ವಿಳಂಬವಾಗಿದ್ದರಿಂದಾಗಿ ಹತಾಶನಾಗಿ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

 

%d bloggers like this: