You cannot copy content of this page.
. . .

ಕುಮಟಳ್ಳಿಗೆ ಟಿಕೆಟ್; ಡಿಸಿಎಂ ಸವದಿ ಸ್ಥಿತಿ ಅತಂತ್ರ..

   ಚುನಾವಣೆಯಲ್ಲಿ ಸೋತರೂ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡಿರುವ ಲಕ್ಷ್ಮಣ ಸವದಿ ಸ್ಥಿತಿ ಅತಂತ್ರವಾಗಿದೆ. ಉಪಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ಅಥಣಿ ಟಿಕೆಟ್‍ ನೀಡಿ, ಮಹೇಶ್‍ ಕುಮಟಳ್ಳಿಗೆ ಬೇರೆ ವ್ಯವಸ್ಥೆ ಮಾಡಲಾಗುತ್ತದೆಂದು ಹೇಳಲಾಗಿತ್ತು. ಆದರೆ ಬಿಜೆಪಿ ಮಾತು ಕೊಟ್ಟಂತೆ ಅನರ್ಹ ಶಾಸಕ ಮಹೇಶ್‍ ಕುಮಟಳ್ಳಿಗೆ ಟಿಕೆಟ್‍ ಘೋಷಣೆ ಮಾಡಿದೆ. ಹೀಗಾಗಿ ಲಕ್ಷ್ಮಣ ಸವದಿ ಕಂಗಾಲಾಗಿದ್ದಾರೆ. ಕೋರ್ಟ್‍ ತೀರ್ಪಿನ ನಂತರ ಸವದಿ ಮನೆ ಬಿಟ್ಟು ಹೊರಬಂದಿರಲಿಲ್ಲ. ಅನರ್ಹರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಅವರು ಗೈರು ಹಾಜರಾಗಿದ್ದರು.

  ಹೈಕಮಾಂಡ್‍ ಸೂಚನೆ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿಯವರನ್ನು ಡಿಸಿಎಂ ಆಗಿ ನೇಮಕ ಮಾಡಲಾಗಿತ್ತು. ಆದರೆ, ಅವರು ಚುನಾಯಿತ ಪ್ರತಿನಿಧಿಯಾಗಿಲ್ಲದಿದ್ದುದರಿಂದ 6 ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನಪರಿಷತ್‍ಗೆ ಆಯ್ಕೆಯಾಗಬೇಕು. ಆದರೆ ಈಗಾಗಲೇ ಪರಿಷತ್‍ ಸದಸ್ಯರು ಯಾರೂ ಸ್ಥಾನ ಬಿಟ್ಟುಕೊಡೋಕೆ ರೆಡಿ ಇಲ್ಲ ಅಂತ ಹೇಳಿದ್ದಾರೆ. ಇತ್ತ ಉಪಚುನಾವಣೆಯಲ್ಲಿ ಸ್ಥಾನ ಸಿಗುತ್ತೆ ಎಂದು ನಂಬಿದ್ದ ಸವದಿಗೆ ಈಗ ನಿರಾಸೆಯಾಗಿದೆ. ಇನ್ನು ಮೂರು ತಿಂಗಳು ಮಾತ್ರ ಉಳಿದಿದ್ದು, ಅಷ್ಟರೊಳಗೆ ಚುನಾಯಿತರಾಗದಿದ್ದರೆ ಸವದಿ ಡಿಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ.

 

%d bloggers like this: