You cannot copy content of this page.
. . .

ಕಾರು ಡಿಕ್ಕಿ; ಬೈಕ್ ಸವಾರ ಸಾವು

ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸಮೀಪದ ಹೊನ್ನೇನಹಳ್ಳಿ ಬಳಿ ನಡೆದಿದೆ.
ಮೂಲತಃ ಪಿರಿಯಾಪಟ್ಟಣ ತಾಲ್ಲೂಕಿನ ಹುಣಸವಾಡಿಯ ಹನುಮಂತನಾಯಕ ಮತ್ತು ಚೆಲುವಮ್ಮ ದಂಪತಿ ಪುತ್ರ ಎಚ್.ಎಚ್.ರಘು (೩೦) ಮೃತಪಟ್ಟವರು.
ಇವರು ಹುಣಸೂರಿನ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಂಪನಿಯ ಕೆಲಸದ ನಿಮಿತ್ತ ಶುಕ್ರವಾರ ಹನಗೋಡು ಬಳಿಯ ವಡ್ಡಂಬಾಳು ಗ್ರಾಮಕ್ಕೆ ತೆರಳಿದ್ದ ರಘು ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುವ ವೇಳೆ ಹಿಂಬದಿಯಿಂದ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.
ದಾರಿ ಹೋಕರು ಕಂಪನಿಗೆ ಮಾಹಿತಿ ನೀಡಿದ ಮೇರೆಗೆ ಸಹೋದ್ಯೋಗಿಗಳು ಸ್ಥಳಕ್ಕಾಗಮಿಸಿ ಗಾಯಗೊಂಡಿದ್ದ ರಘುವನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದರೂ ಪ್ರಯೋಜನವಾಗದೆ ಮೃತಟ್ಟಿದ್ದಾರೆ.
ಅಪಘಾತ ನಡೆಸಿದ ಕಾರು ಚಾಲಕ ಗಾಯಾಳು ರಘುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಬದಲು, ಕಾರನ್ನು ಅತೀವೇಗವಾಗಿ ಓಡಿಸಿಕೊಂಡು ಹನಗೋಡು ಬಳಿಯ ಶಿಂಡೇನಹಳ್ಳಿಯ ಹೊಲವೊಂದರಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಕಾರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು ಚಾಲಕನ ಪತ್ತೆಗೆ ಕ್ರಮ ವಹಿಸಿದ್ದಾರೆ.

 

%d bloggers like this: