You cannot copy content of this page.
. . .

ಕರ್ತವ್ಯ ಲೋಪ ಹಿನ್ನೆಲೆ; ತನ್ವೀರ್‍ ಸೇಠ್‍ ಗನ್‍ ಮ್ಯಾನ್‍ ಅಮಾನತು

   ಕರ್ತವ್ಯದ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಶಾಸಕ ತನ್ವಿರ್‍ ಸೇಠ್‍ ಗನ್‍ ಮ್ಯಾನ್‍ ಫೈರೋಜ್‍ ಖಾನ್‍ ರನ್ನು ಅಮಾನತುಗೊಳಿಸಿ ಪೊಲೀಸ್‍ ಆಯುಕ್ತ ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ.

  ಭಾನುವಾರ ರಾತ್ರಿ ಮದುವೆ ಸಮಾರಂಭವೊಂದರಲ್ಲಿ ಶಾಸಕ ತನ್ವಿರ್‍ ಸೇಠ್‍ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ವೇಳೆ ಭದ್ರತೆಗಿದ್ದ ಫೈರೋಜ್‍ ಖಾನ್‍ , ಈ ಕೃತ್ಯವನ್ನು ತಡೆಯುವಲ್ಲಿ ವಿಫಲನಾಗಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸ್‍ ಇಲಾಖೆ, ಕರ್ತವ್ಯ ಲೋಪವೆಸಗಿದ್ದಾನೆಂಬ ಕಾರಣಕ್ಕೆ ಫೈರೋಜ್‍ ಖಾನ್‍ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

 

%d bloggers like this: