You cannot copy content of this page.
. . .

ಕರೆಂಟ್‍ ಶಾಕ್: ಮೂವರು ಮಹಿಳೆಯರು ಅಸ್ವಸ್ಥ

ಬಟ್ಟೆ ಒಣಹಾಕುತ್ತಿದ್ದ ವೇಳೆ ವಿದ್ಯುತ್‍ ಪ್ರವಹಿಸಿ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ.

ಚಾಮರಾಜನಗರದ ಯಳಂದೂರು ತಾಲ್ಲೂಕಿನ ಕಂದಹಳ್ಳಿಯಲ್ಲಿ ಇಂದು (ಸೋಮವಾರ) ಈ ದಾರುಣ ಘಟನೆ ನಡೆದಿದೆ.

ಕುಮಾರಿ, ಸುಮಾ, ನಾಗರತ್ನ ಅಸ್ವಸ್ಥಗೊಂಡ ಮಹಿಳೆಯರು. ತಾಯಿ ಕುಮಾರಿ ಹಾಗೂ ಮಗಳಾದ ಸುಮಾ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಮೂವರು ಮಹಿಳೆಯರು ಬಟ್ಟೆ ಒಗೆದ ನಂತರ ಮನೆಯ ಹಿಂದಿನ ಕೊಟ್ಟಿಗೆಯ ಮುಳ್ಳುತಂತಿಗೆ ಬಟ್ಟೆ ಒಣ ಹಾಕುತ್ತಿದ್ದ ವೇಳೆ ವಿದ್ಯುತ್‍ ಪ್ರವಹಿಸಿದೆ ಎನ್ನಲಾಗಿದೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

%d bloggers like this: