You cannot copy content of this page.
. . .

ಒಂಟಿ ಸಲಗದ ದಾಳಿಗೆ ಬಾಳೆ ಬೆಳೆ ನಾಶ

 ಎಚ್.ಡಿ.ಕೋಟೆ: ತಾಲ್ಲೂಕಿನ ಬಡಗಲಪುರ ಗ್ರಾಮದ ಸಮೀಪದ ರೈತರ ಜಮೀನಿನಲ್ಲಿ ಕಾಡಾನೆ ದಾಳಿಯಿಂದ ಬಾಳೆ ಬೆಳೆ ನಾಶವಾಗಿದೆ.

 ಗ್ರಾಮದ ರೈತ ಜಯಶಂಕರ ಅವರ 3 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆಯನ್ನು ಬಂಡೀಪುರ ಅಭಯಾರಣ್ಯದಿಂದ ಬುಧವಾರ ರಾತ್ರಿ ಆಗಮಿಸಿದ ಒಂಟಿ ಸಲಗ ತಿಂದು ನಾಶಪಡಿಸಿದೆ.
ಘಟನೆಯಲ್ಲಿ 500ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕಚ್ಚಿದ್ದು, ಗುರುವಾರ ಬೆಳಿಗ್ಗೆ ಎಂದಿನಂತೆ ರೈತ ಕುಟುಂಬ ಜಮೀನಿಗೆ ಹೋಗುತ್ತಿದ್ದಂತೆ ವಿಷಯ ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕೊಡುವ ಆಶ್ವಾಸನೆ ನೀಡಿದ್ದಾರೆ.

 

%d bloggers like this: