You cannot copy content of this page.
. . .

ಎರಡು ತಲೆ ಹಾವು ಮಾರಾಟಕ್ಕೆ ಯತ್ನ; ಐವರ ಬಂಧನ

 ಗೋಣಿಕೊಪ್ಪ: ಕಪ್ಪು ಬಣ್ಣದ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ವಿರಾಜಪೇಟೆ ತಾಲ್ಲೂಕು ಸಿಐಡಿ ಅರಣ್ಯ ಸಂಚಾರಿ ಪೊಲೀಸ್ ದಳ ಬಂದಿಸಿದ್ದಾರೆ.

 ಆಂಧ್ರ ಮೂಲದ ನಿವಾಸಿಗಳಾದ ಮುಲ್ಲಾಮೆಹಬೂಬ್‌ವಲೀ (57), ಶೇಖ್‌ಮುಲ್ಲಾಚಾಂದ್‌ಪಾಶ (45), ಎಸ್.ಫಯಾಜ್ (27), ಬೋಯಿರಂಗಸ್ವಾಮಿ (45), ಶೇಕ್‌ಪೆದ್ದ ಮೆಹಬೂಬುಪಾಷ (29) ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 ಆಂದ್ರಪ್ರದೇಶದಿಂದ ಕೇರಳಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲಿಸರು ಆರೋಪಿಗಳನ್ನು ತಿತಿಮತಿ ಮುಖ್ಯ ರಸ್ತೆ ಬಳಿ ಬಂಧಿಸಿ ಹಾವು ಹಾಗೂ ಅದನ್ನು ಸಾಗಿಸಲು ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

 ಬುಧವಾರ ಸಂಜೆ ವೇಳೆ ಕಪ್ಪು ಬಣ್ಣದ ಎರಡು ತಲೆಯ ಹಾವನ್ನು ಆಂಧ್ರಪ್ರದೇಶದಿಂದ ಕೇರಳಕ್ಕೆ ಸಾಗಿಸಿ 2 ಕೋಟಿ ರೂ. ಬೆಲೆಗೆ ಮಾರಾಟ ಮಾಡುವ ಯೋಜನೆ ರೂಪಿಸಿದ್ದರು. ಕಾರಿನಲ್ಲಿ ಕೆಂಪು ಬಣ್ಣದ ಕಿಟ್ ಬ್ಯಾಗಿನಲ್ಲಿ ಮರಳು ಮತ್ತು ರಾಗಿ ಬೀಜಗಳನ್ನು ತುಂಬಿ ಹಾವನ್ನು ಬಂಧಿಸಿ ತರಲಾಗಿತ್ತು.

Leave a Reply

 

%d bloggers like this: