You cannot copy content of this page.
. . .

ಎಚ್.ವಿಶ್ವನಾಥ್ ಅಲ್ಲ.. ಹೈ ಡೀಲ್ ವಿಶ್ವನಾಥ್; ಸಾರಾ ವ್ಯಂಗ್ಯ

   ಹುಣಸೂರು ಚುನಾವಣಾ ಕಣದಲ್ಲಿ ವಾಗ್ಯುದ್ಧಗಳು ಜೋರಾಗಿ ನಡೆಯುತ್ತಿದೆ. ಅದರಲ್ಲೂ ಎರಡು ದಿನದಿಂದ ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಶಾಸಕ ಸಾ.ರಾ.ಮಹೇಶ್‍, ಅನರ್ಹ ಶಾಸಕ ಎಚ್‍.ವಿಶ್ವನಾಥ್‍ ವಿರುದ‍್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇವತ್ತು ಅವರು ಶಿರಿಯೂರಿನಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಿಸ್ಟರ್‍ ಕ್ಲೀನ್‍ ವಿಶ್ವನಾಥ್‍ ಹರಿಸುತ್ತಿರುವ ದುಡ್ಡು ಯಾವುದು..? ಎಂದು ಪ್ರಶ್ನಿಸಿದರು. ಅದು ವರ್ಗಾವಣೆ ದಂಧೆಯ ದುಡ್ಡಾ..? ಅಥವಾ ಗುತ್ತಿಗೆದಾರರಿಂದ ವಸೂಲಿ ಮಾಡಿದ್ದಾ ಎಂದು ಕೇಳಿದರು. ಮುಂದುವರೆಯುತ್ತಾ, ವಿಶ್ವನಾಥ್‍ ಅವರು ಬರೀ ಎಚ್‍.ವಿಶ್ವನಾಥ್‍ ಅಲ್ಲ, ಹೈ ಡೀಲ್‍ ವಿಶ್ವನಾಥ್ ಎಂದು ವ್ಯಂಗ್ಯವಾಡಿದರು.

 

%d bloggers like this: