You cannot copy content of this page.
. . .

ಉಪ ಸಮರ: ಡಿ.9ಕ್ಕೆ ಎಲ್ಲೆಲ್ಲಿ ಮತ ಎಣಿಕೆ ನಡೆಯುತ್ತೆ..?

73 Views

  ಡಿಸೆಂಬರ್‍ 5 ರಂದು ನಡೆಯುವ 15 ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಅಭ್ಯರ್ಥಿಗಳು ಮತದಾರರನ್ನು ಒಲಿಸಿಕೊಳ್ಳಲು ಕೊನೆ ಹಂತದ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಜಿಲ್ಲಾಡಳಿತಗಳು ಮತದಾನ ಹಾಗೂ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ‍್ಧತೆ ಮಾಡಿಕೊಳ್ಳುತ್ತಿವೆ. ಡಿಸೆಂಬರ್‍ 9 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲೆಲ್ಲಿ ಯಾವ ಕ್ಷೇತ್ರದ ಮತ ಎಣಿಕೆ ನಡೆಯಲಿದೆ..? ಇಲ್ಲಿದೆ ಮಾಹಿತಿ..

  • ಕೃಷ್ಣರಾಜಪೇಟೆ– ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೆ.ಆರ್ ಪೇಟೆ
    ಹುಣಸೂರು ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು
  • ಅಥಣಿ, ಕಾಗವಾಡ, ಗೋಕಾಕ್ – ರಾಣಿ ಪಾರ್ವತಿದೇವಿ ಕಾಲೇಜು, ವಾಸುದೇವ ಸೀತಾರಾಮ್ ಘೋಟಗೆ ವಿದ್ಯಾಭವನ,ಬೆಳಗಾವಿ
    ಯಲ್ಲಾಪುರ– ಮಾಡರ್ನ್ ಎಜುಕೇಷನ್ ಸೊಸೈಟಿ ಕಾಮರ್ಸ್ ಕಾಲೇಜು, ಶಿರಸಿ
    ಹಿರೇಕೆರೂರು,ರಾಣೆಬೆನ್ನೂರು – ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ದೇವಗಿರಿ, ಹಾವೇರಿ
    ವಿಜಯನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಬಳ್ಳಾರಿ
    ಚಿಕ್ಕಬಳ್ಳಾಪುರ– ಸರ್ಕಾರಿ ಹಿರಿಯ ಪ್ರಾಥಮಿಕ, ಬಿಬಿ ರಸ್ತೆ ಶಾಲೆ, ಚಿಕ್ಕಬಳ್ಳಾಪುರ
    ಕೆ.ಆರ್.ಪುರ– ಮಹಾಲಕ್ಷ್ಮಿ ಲೇಔಟ್-ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠ್ಠಲ ಮಲ್ಯ ರಸ್ತೆ, ಬೆಂಗಳೂರು
    ಯಶವಂತಪುರ-ಆರ್.ವಿ ಇಂಜಿನಿಯರಿಂಗ್ ಕಾಲೇಜು, ಮೈಸೂರು ರಸ್ತೆ, ಬೆಂಗಳೂರು
    ಶಿವಾಜಿನಗರ– ಮೌಂಟ್ ಕಾರ್ಮೆಲ್ ಕಾಲೇಜು, ವಸಂತ ನಗರ, ಬೆಂಗಳೂರು
    ಹೊಸಕೋಟೆ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್, ದೇವನಹಳ್ಳಿ

Leave a Reply

 

%d bloggers like this: