. . .

ಉಪಸಮರ: 13 ಅನರ್ಹರಿಗೆ ಟಿಕೆಟ್, ಶರವಣಗೆ ಶಿವಾಜಿನಗರ..!

88 Views

      ಡಿಸೆಂಬರ್‍ 5ರಂದು ನಡೆಯುವ 15 ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  13 ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್‍ ಖಾತ್ರಿಯಾಗಿದೆ. ಆದರೆ ರಾಣೆಬೆನ್ನೂರಿನ ಅನರ್ಹ ಶಾಸಕ ಶಂಕರ್‍ ಬಿಜೆಪಿ ಸೇರ್ಪಡೆಯಾಗಿದ್ದರೂ ಅವರ ಹೆಸರನ್ನು ಬಿಜೆಪಿ ಪಟ್ಟಿಯಲ್ಲಿ ಘೋಷಣೆ ಮಾಡಿಲ್ಲ. ಇನ್ನು ಶಿವಾಜಿನಗರದ ಅನರ್ಹ ಶಾಸಕ ರೋಷನ್‍ ಬೇಗ್‍ರನ್ನು ಇನ್ನೂ ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಈ ನಡುವೆ ಎಂ.ಶರವಣ ಎಂಬುವವರನ್ನು ಶಿವಾಜಿನಗರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. 2ನೇ ಪಟ್ಟಿಯಲ್ಲಿ ಮಾಜಿ ಕಾರ್ಪೊರೇಟರ್‍ ಶರವಣಗೆ ಟಿಕೆಟ್‍ ಘೋಷಣೆ ಮಾಡಿದೆ. ರೋಷನ್‍ ಬೇಗ್  ಐಎಂಎ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್‍ ನೀಡಬಾರದೆಂದು ಬಿಜೆಪಿ ಕೆಲವರು ಪಟ್ಟುಹಿಡಿದಿದ್ದರು.

 

                  ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  1. ಅಥಣಿ –ಮಹೇಶ್‍ ಕುಮಟಳ್ಳಿ
  2. ಕಾಗವಾಡ- ಶ್ರೀಮಂತಗೌಡ ಪಾಟೀಲ್‍
  3. ಯಲ್ಲಾಪುರ-ಶಿವರಾಮ್‍ ಹೆಬ್ಬಾರ್
  4. ಗೋಕಾಕ್‍-ರಮೇಶ್‍ ಜಾರಕಿಹೊಳಿ
  5. ಹಿರೇಕೆರೂರು-ಬಿ.ಸಿ.ಪಾಟೀಲ್‍
  6. ಚಿಕ್ಕಬಳ್ಳಾಪುರ-ಡಾ.ಕೆ.ಸುಧಾಕರ್
  7. ವಿಜಯನಗರ-ಆನಂದ್‍ ಸಿಂಗ್‍
  8. ಕೆ.ಆರ್‍.ಪುರಂ_ಭೈರತಿ ಬಸವರಾಜ್
  9. ಹೊಸಕೋಟೆ-ಎಂಟಿಬಿ ನಾಗರಾಜ್‍
  10. ಯಶವಂತಪುರ-ಎಸ್‍.ಟಿ.ಸೋಮಶೇಖರ್
  11. ಮಹಾಲಕ್ಷ್ಮಿ ಲೇಔಟ್‍-ಕೆ.ಗೋಪಾಲಯ್ಯ
  12. ಕೆ.ಆರ್‍.ಪೇಟೆ-ಕೆ.ಸಿ.ನಾರಾಯಣ ಗೌಡ
  13. ಹುಣಸೂರು-ಎಚ್‍.ವಿಶ್ವನಾಥ್‍
  14. ಶಿವಾಜಿನಗರ-ಎಂ.ಶರವಣ

   ಮೈಸೂರು ಜಿಲ್ಲೆ ಹುಣಸೂರು ಕ್ಷೇತ್ರದಲ್ಲಿ ಎಚ್‍.ವಿಶ್ವನಾಥ್‍ಗೆ ಬದಲಾಗಿ ಸಿ.ಪಿ.ಯೋಗೇಶ್ವರ್ ಅಥವಾ ಜಿ.ಟಿ.ದೇವೇಗೌಡರ ಪುತ್ರ ಹರೀಶ್‍ ಗೌಡಗೆ ಬಿಜೆಪಿ ಟಿಕೆಟ್‍ ನೀಡಲಾಗುತ್ತೆ ಎಂದು ಹೇಳಲಾಗುತ್ತಿತ್ತು. ಅದರಲ್ಲೂ ಸಿ.ಪಿ.ಯೋಗೇಶ್ವರ್‍ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ಕೊನೆಗೂ ಎಲ್ಲಾ ಗೊಂದಲಗಳೂ ನಿವಾರಣೆಯಾಗಿವೆ. ಅನರ್ಹ ಶಾಸಕ ಎಚ್‍.ವಿಶ್ವನಾಥ್‍ ಅವರಿಗೇ ಟಿಕೆಟ್‍ ಸಿಕ್ಕಿದೆ.

 

%d bloggers like this: