You cannot copy content of this page.
. . .

ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು

 ಹನೂರು: ತಾಲ್ಲೂಕಿನ ಶಿರಗೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಬಗ್ಗೆ ಸಂಶಯ ವ್ಯಕ್ತವಾಗಿದೆ.

 ಶಿರಗೋಡು ಗ್ರಾಮದ ಬಾಲಾಜಿ ಹಾಗೂ ಮಂಜುಳಾ ದಂಪತಿಯ ಪುತ್ರಿಯರಾದ ಲಕ್ಷ್ಮೀ (6) ಹಾಗೂ ಕೀರ್ತನಾ (11) ಮೃತ ದುರ್ದೈವಿಗಳು. ದಂಪತಿಗೆ ನಾಲ್ವರು ಪುತ್ರಿಯರು, ಒರ್ವ ಪುತ್ರ ಇದ್ದನು. ಇವರೆಲ್ಲರೂ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದೆ ಇವರೆಲ್ಲರೂ ಗ್ರಾಮಕ್ಕೆ ಆಗಮಿಸಿ ಇಲ್ಲಿಯೇ ನೆಲೆಸಿದ್ದರು.

 ಗುರುವಾರ ರಾತ್ರಿ ಬಾಲಾಜಿಯ ಅಣ್ಣನ ಮನೆಯಲ್ಲಿ ಕೋಳಿ ಸಾಂಬಾರ್ ಮಾಡಲಾಗಿತ್ತು. ಸಾಂಬಾರ್ ಅನ್ನು ಮನೆಗೆ ತಂದು ಮಕ್ಕಳೆಲ್ಲರೂ ಊಟ ಮಾಡಿ ಮಲಗಿದರು. ವೇಳೆ ಲಕ್ಷ್ಮೀ ಹಾಗೂ ಕೀರ್ತನಾ ಅವರ ಬಾಯಿ, ಮೂಗಿನಲ್ಲಿ ನೊರೆ ಬರಲು ಪ್ರಾರಂಭಿಸಿದ್ದು, ತೀವ್ರ ನಿಶಕ್ತಿಗೆ ಒಳಗಾದರು. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 ಶುಕ್ರವಾರ ಬೆಳಗ್ಗೆ ದೂರನ್ನು ದಾಖಲಿಸಿಕೊಂಡ ಪೋಲಿಸರು ಮೃತದೇಹವನ್ನು ಹನೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.

ಸಾವಿನ ಸುತ್ತಾ ಅನುಮಾನದ ಹುತ್ತಾ?

 ರಾತ್ರಿ ಮಕ್ಕಳೆಲ್ಲರೂ ಚಿಕನ್ ಸಾಂಬಾರಿನ ಊಟ ಮಾಡಿದ್ದಾರೆ. ಇನ್ನುಳಿದ ಮೂವರು ಮಕ್ಕಳಿಗೆ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಆದರೆ, ಲಕ್ಷ್ಮೀ ಹಾಗೂ ಕೀರ್ತನಾ ಮೃತಪಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಮೃತದೇಹವನ್ನು ವೈದ್ಯರು ಪರೀಕ್ಷಿಸಲಾಗಿ ಹಾವು ಅಥವಾ ಇನ್ನಿತರೆ ವಿಷ ಜಂತುಗಳು ಕಚ್ಚಿರುವ ಯಾವುದೇ ಗುರುತುಗಳಿಲ್ಲ. ಆಗಾಗಿ, ಸಾರ್ವಜನಿಕ ವಲಯದಲ್ಲಿ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸತ್ಯಾಂಶ ತಿಳಿಯಲಿದೆ.

Leave a Reply

 

%d bloggers like this: