You cannot copy content of this page.
. . .

ಇನ್ಫಿ ಮೂರ್ತಿ ಅಳಿಯ ಈಗ ಇಂಗ್ಲೆಂಡ್‍ ಹಣಕಾಸು ಸಚಿವ

   ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (39) ಅವರನ್ನು ಇಂಗ್ಲೆಂಡ್ ಹಣಕಾಸು ಸಚಿವರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಸಜ್ಜಿದ್‍ ಜಾವೆದ್‍ ಎಂಬುವವರು ಇಂಗ್ಲೆಂಡ್‍ ಹಣಕಾಸು ಸಚಿವರಾಗಿದ್ದರು. ಅವರು ರಾಜೀನಾಮೆ ನೀಡಿದ್ದರಿಂದಾಗಿ ಆ ಸ್ಥಾನಕ್ಕೆ ನಾರಾಯಣ ಮೂರ್ತಿಯವರ ಅಲಿಯನನ್ನು ನೇಮಕ ಮಾಡಲಾಗಿದೆ.

  ಇಂಗ್ಲೆಂಡ್‍ ನಲ್ಲಿ ಮಿನಿಸ್ಟರ್‍ ಬದಲಾಗಿ ಚಾನ್ಸಲರ್‍ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಪಡೆದ ಬಳಿಕ ಪ್ರಧಾನಿ ಬೋರಿಸ್ ಜಾನ್ಸನ್​ ಅವರು ಮೊದಲ ಬಾರಿಗೆ ಸಚಿವ ಸಂಪುಟ ಪುನಾರಚನೆ ಮಾಡಿದ್ದರು. ಆದಾದ ಬಳಿಕ ಹಣಕಾಸು ಸಚಿವ ಸ್ಥಾನಕ್ಕೆ ಸಜ್ಜಿದ್ ಜಾವೆದ್ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ತೆರವಾದ ಸ್ಥಾನಕ್ಕೆ ರಿಷಿ ಸುನಕ್ ಅವರನ್ನು ಬ್ರಿಟನ್ ಸರ್ಕಾರ ನೇಮಕ ಮಾಡಿದೆ. ರಿಷಿ ಅವರು 2015ರಲ್ಲಿ ಮೊದಲ ಬಾರಿಗೆ ಸಂಸತ್​ಗೆ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ರಿಷಿ ಅವರು ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Leave a Reply

 

%d bloggers like this: