You cannot copy content of this page.
. . .

ಇದು ಮಡಿಕೇರಿಯ ನವೋದಯ ವಿದ್ಯಾಲಯದ ದುಸ್ಥಿತಿ..!

 ಬಿರುಕು ಬಿಟ್ಟ ಗೋಡೆಗಳು.. ದುರ್ವಾಸನೆ ಬೀರುತ್ತಿರುವ ಶೌಚಾಲಯಗಳು.. ದನದ ಕೊಟ್ಟಿಗೆಯಂತಹ ಕೊಠಡಿಗಳು.. ಬಣ್ಣ ಕಂಡು ಎಷ್ಟು ವರ್ಷಗಳಾಗಿವೆಯೋ ಏನೋ.. ಇದು ಕೊಡಗಿನ ನವೋದಯ ವಿದ್ಯಾಲಯದ ದುಸ್ಥಿತಿ.

  ಈ ವಿದ್ಯಾಲಯದಲ್ಲಿ 525 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಸೂಕ್ತ ಮೂಲ ಸೌಕರ್ಯಗಳೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹಲವಾರು ಬಾರಿ ಸಂಬಂಧಪಟ್ಟವರು ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಯಾರೂ ಇದಕ್ಕೆ ಸ್ಪಂದಿಸಿಲ್ಲ.

  ಕೊನೆಗೆ ಪೋಷಕರು ಸಂಸದ ಪ್ರತಾಪ ಸಿಂಹ ಅವರಿಗೆ ದೂರು ನೀಡಿದ್ದರು. ಇಂದು ಸ್ಥಳಕ್ಕೆ ಆಗಮಿಸಿದ್ದ ಸಂಸದ ಪ್ರತಾಪ ಸಿಂಹ ಪರಿಶೀಲನೆ ನಡೆಸಿದರು. ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಪ್ರತಾಪ ಸಿಂಹ ಅವರೇ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಸತಿ ಶಾಲೆಯ ದುಸ್ಥಿತಿಯ ಫೋಟೋಗಳನ್ನು ಟ್ವಿಟರ್‍ ನಲ್ಲಿ ಹಂಚಿಕೊಂಡಿದ್ದಾರೆ.

 

 

%d bloggers like this: