You cannot copy content of this page.
. . .

ಆಸ್ತಿಗಾಗಿ ತಮ್ಮನ ಹೆಂಡತಿ ಕೊಲೆ

ಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬ ತನ್ನ ತಮ್ಮನ ಹೆಂಡತಿಯನ್ನೇ ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕುಶಾಲನಗರ ಸಮೀಪದ ರಂಗಸಮುದ್ರದಲ್ಲಿ ನಡೆದಿದೆ.

ರಂಗಸಮುದ್ರದ ಬಿಪಿನ್ ಎಂಬಾತನೇ ಬಂಧಿತ ಆರೋಪಿ. ತಮ್ಮನ ಹೆಂಡತಿ ಜಲಜಾಕ್ಷಿ (೪೨) ಕೊಲೆಯಾದ ಮಹಿಳೆ. ಎಂದಿನಂತೆ ಅಮ್ಮತಿಯಿಂದ ರಂಗಸಮುದ್ರದ ತಮ್ಮ ಕಾಪಿ ತೋಟದಲ್ಲಿ ಕೆಲಸ ಮಾಡಲು ಬಂದಿದ್ದ ಜಲಜಾಕ್ಷಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿಗಾಗಿ ಅಣ್ಣತಮ್ಮನ ನಡುವೆ ಹಲವು ದಿನಗಳಿಂದ ಕಲಹ ನಡೆಯುತ್ತಿತ್ತು. ಇದೇ ವಿಚಾರದಲ್ಲಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

 

%d bloggers like this: