You cannot copy content of this page.
. . .

ಅರ್ಚಕನ ವಿರುದ್ಧ ರೇಪ್ ಅಸ್ತ್ರ; 20 ಲಕ್ಷ ರೂಪಾಯಿ ವಸೂಲಿ..!

ಕೊಳ್ಳೇಗಾಲ: ಅರ್ಚಕರೊಬ್ಬರ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ಬ್ಲ್ಯಾಕ್‍ಮೇಲ್‍ ಮಾಡಿ 20 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಮೂವರನ್ನು ಬಂಧಿಸಿರುವ ಕೊಳ್ಳೇಗಾಲ ಪೊಲೀಸರು, ಆರೋಪಿಗಳಿಂದ 13.77 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

  ಬೆಂಗಳೂರಿನ ಸರೋಜಮ್ಮ, ನಾಗರತ್ನಮ್ಮ, ಬಸವರಾಜು ಬಂಧಿತ ಆರೋಪಿಗಳು. ಆಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಾಘವನ್ ಬ್ಲ್ಯಾಕ್‍ಮೇಲ್‍ ಜಾಲಕ್ಕೆ ಸಿಲುಕಿದ್ದವರು.

ಏನಿದು ಪ್ರಕರಣ..?

   ರಾಘವನ್‍ ಅವರು ಜನರ ಅಪೇಕ್ಷೆ ಮೇರೆಗೆ ಮನೆಮನೆಗೆ ತೆರಳಿ ಅರ್ಚಕ ವೃತ್ತಿ ಮಾಡುತ್ತಿದ್ದರು. ಅದೇ ರೀತಿ ಹೆಸರಘಟ್ಟದ ಸರೋಜಮ್ಮ ಎಂಬುವರ ಮನೆಯಲ್ಲಿ ಮೂರು ತಿಂಗಳ ಹಿಂದೆ ಪೂಜೆ ನಡೆಸಿಕೊಟ್ಟು ಬಂದಿದ್ದರು. ನಂತರ ಆರೋಪಿಗಳು ರಾಘವನ್ ಅವರನ್ನು ಹೆದರಿಸಿ, ನಿನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲು ಬಂದಿದ್ದೇವೆ. 20 ಲಕ್ಷ ರೂಪಾಯಿ ಕೊಡು. ಇಲ್ಲದಿದ್ದರೆ ಮಾಧ್ಯಮದವರಿಗೆ ತಿಳಿಸಿ ನಿನ್ನ ಮರ್ಯಾದೆ ತೆಗೆಯುತ್ತೇವೆ ಎಂದು ಬೆದರಿಸಿ ಹಣ ವಸೂಲಿ ಮಾಡಿದ್ದರು. ಮೂರು ತಿಂಗಳ ನಂತರ ಅದೇ ಆಸಾಮಿಗಳು ರಾಘವನ್ ಅವರಿಗೆ ದೂರವಾಣಿ ಕರೆ ಮಾಡಿ ಮತ್ತೆ 50 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು. ಈ ಸಂಭಾಷಣೆಯನ್ನು ರಾಘವನ್‍ ಅವರು ತಮ್ಮ ಮೊಬೈಲ್‍ನಲ್ಲಿ ರೆಕಾರ್ಡ್‍ ಮಾಡಿಕೊಂಡು ಆ ಆಡಿಯೋವನ್ನು ಪೊಲೀಸರಿಗೆ ನೀಡಿ, ಪ್ರಕರಣ ದಾಖಲಿಸಿದ್ದರು.

 ರಾಘವನ್‍ ಅವರು ಪೊಲೀಸರ ಸಲಹೆಯಂತೆ ಹಣ ಕೊಡುವುದಾಗಿ ಆರೋಪಿಗಳನ್ನು ಮದ್ದೂರಿಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರನ್ನು ವಿಚಾರಣೆಗೊಳಪಡಿಸಿ, ಅವರಿಂದ 13.77 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  ಪಿಎಸ್‍ಐ ರಾಜೇಂದ್ರ, ಮುಖ್ಯಪೇದೆ ರಂಗಸ್ವಾಮಿ, ಸೂರ್ಯ ಪ್ರಕಾಶ್, ನಾಗೇಂದ್ರ ರಾಜೇ ಅರಸ್‍, ಮಹಿಳಾ ಪೇದೆಗಳಾದ ಭಾಗ್ಯಮ್ಮ, ತಾಯಮ್ಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

%d bloggers like this: