You cannot copy content of this page.
. . .

‘ಅಯೋಗ್ಯ’ ಸಹನಟಿಯ ಸುಪಾರಿ; ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ

   ಅಯೋಗ್ಯ ಚಿತ್ರದ ಸಹನಟಿ ದೃಶ್ಯ ವಿರುದ‍್ಧ ರಿಯಲ್‍ ಎಸ್ಟೇಟ್‍ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿದ ಆರೋಪ ಕೇಳಿಬಂದಿದೆ. ಕೊಟ್ಟ ಹಣ ವಾಪಸ್‍ ಕೇಳಿದ್ದಕ್ಕೆ ನಟಿ ದೃಶ್ಯ ಹಾಗೂ ಆಕೆಯ ತಂದೆ ಕುಂದಾಪುರ ಮೂಲದ ರಿಯಲ್‍ ಎಸ್ಟೇಟ್‍ ಉದ್ಯಮಿ ರಾಜೇಶ್ ಮೇಲೆ ಹಲ್ಲೆ ಮಾಡಿಸಿದ್ದಾರೆಂದು ತಿಳಿದುಬಂದಿದೆ. ಶ್ರೀರಂಗಪಟ್ಟಣ ಬಳಿಯ ಬಲಮುರಿಯಲ್ಲಿ ಈ ಕೃತ್ಯ ನಡೆದಿದ್ದು, ಗಾಯಾಳು ರಾಜೇಶ್‍ ಮೈಸೂರಿನ ಕೆ.ಆರ್‍.ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಉದ್ಯಮಿ ರಾಜೇಶ್‍ ನಟಿ ದೃಶ್ಯಗೆ ಸಾಲವಾಗಿ ಹಣ ನೀಡಿದ್ದು, ಅದನ್ನು ವಾಪಸ್‍ ಕೊಡುವಂತೆ ಕೇಳಿದ್ದರಂತೆ. ಇದರಿಂದ ಕೆರಳಿದ ದೃಶ್ಯ ರಾಜೇಶ್‍ ಮೇಲೆ ಹಲ್ಲೆ ಮಾಡಿಸಿದ್ದಾಳೆಂದು ಗೊತ್ತಾಗಿದೆ. ರಾಜೇಶ್‍ ಬಲಮುರಿಗೆ ಬಂದಿದ್ದಾಗ, ನಾಲ್ವರು ದುಷ್ಕರ್ಮಿಗಳು ದಾಳಿ ಮಾಡಿದ್ದು, ರೇಜರ್‍ ನಿಂದ ಹಲ್ಲೆ ಮಾಡಿದ್ದಾರೆ. ಆಗ ಸ್ಥಳೀಯರು ರಾಜೇಶ್‍ ನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಮಾಡುವಾಗ ದೃಶ್ಯ ಬಳಿ ಹಣ ಕೇಳ್ತೀಯಾ ಎಂದು ಪ್ರಶ್ನೆ ಮಾಡುತ್ತಾ ಹಲ್ಲೆ ಮಾಡಿದರೆಂದು ರಾಜೇಶ್‍ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕೆಆರ್‍ಎಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ನಟಿ ದೃಶ್ಯ ಹಾಗೂ ಆಕೆಯ ತಂದೆ ಪರಾರಿಯಾಗಿದ್ದಾರೆ.

 

%d bloggers like this: