You cannot copy content of this page.
. . .

ಅಮೆರಿಕದಲ್ಲಿ ಶೂಟೌಟ್ ಪ್ರಕರಣ: ಅಭಿಷೇಕ್ ನಿವಾಸಕ್ಕೆ ಶ್ರೀರಾಮುಲು ಭೇಟಿ

72 Views

   ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಮೈಸೂರಿನ ಅಭಿಷೇಕ್‍ ನಿವಾಸಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ಮಾಡಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೈಸೂರಿನ ಕುವೆಂಪುನಗರದ E & F ಬ್ಲಾಕ್‍ ನಲ್ಲಿ ಮೃತ ಅಭಿಷೇಕ್‍ ಅವರ ನಿವಾಸವಿದೆ. ಅಭಿಷೇಕ್‍ ತಂದೆ ಸುದೇಶ್‍ ಚಂದ್‍ ಯೋಗಾ ಶಿಕ್ಷಕರಾಗಿದ್ದು, ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಮಗ ಕೊಲೆಯಾದ ವಿಚಾರ ತಿಳಿದು ದಿಕ್ಕುತೋಚದಂತಾಗಿದ್ದಾರೆ. ಅವರ ಗೋಳಾಟ ತಿಳಿದು ಸಚಿವರು ಭೇಟಿ ನೀಡಿ ಮೃತ ಅಭಿಷೇಕ್‍ ಕುಟುಂಬಕ್ಕೆ ಸಾಂತ್ವನ ಹೇಳಿದರು.

 ಇದೇ ವೇಳೆ ಮಾತನಾಡಿದ ಮೃತ ಅಭಿಷೇಕ್‍ ತಂದೆ ಸುದೇಶ್‍ ಚಂದ್‍, ಸಾಲ ಮಾಡಿ ಮಕ್ಕಳನ್ನು ವಿದೇಶದಲ್ಲಿ ಓದಲು ಕಳುಹಿಸುತ್ತೇವೆ. ಅಲ್ಲಿ ಇಂತಹ ದುರಂತಗಳು ನಡೆಯುತ್ತವೆ. ಹೀಗಾಗಿ ಕೇಂದ್ರ ಸರ್ಕಾರ ವಿದೇಶದಲ್ಲಿರುವ ಭಾರತೀಯರ ರಕ್ಷಣೆ ಕುರಿತು ಯೋಚನೆ ಮಾಡಬೇಕು ಎಂದು ಹೇಳಿದರು.

  ಇನ್ನು ಅಭಿಷೇಕ್‍ ಕೊಲೆ ಹೇಗಾಯಿತು..? ದುಷ್ಕರ್ಮಿಗಳು ಯಾರು ಎಂಬುದರ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಭಿಷೇಕ್‍ ಮರಣೋತ್ತರ ಪರೀಕ್ಷೆ ನಡೆಸಲು ಇನ್ನೂ 8 ದಿನ ಬೇಕು ಅಂತ ಗೊತ್ತಾಗಿದೆ. ಹೀಗಾಗಿ, ಅಭಿಷೇಕ್‍ ಪೋಷಕರನ್ನು ಅಮೆರಿಕಕ್ಕೇ ಕರೆಸಿಕೊಂಡು ಅಲ್ಲೇ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

 

%d bloggers like this: