You cannot copy content of this page.
. . .

ಅಮೆರಿಕದಲ್ಲಿ ಅಪರಿಚಿತರ ಗುಂಡೇಟಿಗೆ ಮೈಸೂರು ವಿದ್ಯಾರ್ಥಿ ಬಲಿ

   ವಿದ್ಯಾಭ್ಯಾಸ ಮಾಡಿಕೊಂಡು ಹೋಟೆಲ್‍ ನಲ್ಲಿ ಕೆಲಸ ಮಾಡುತ್ತಿದ್ದ  ಮೈಸೂರಿನ ವಿದ್ಯಾರ್ಥಿಯೊಬ್ಬನನ್ನು ಅಮೆರಿಕದಲ್ಲಿ ಗುಂಡಿಟ್ಟು ಕೊಲೆ ಮಾಡಲಾಗಿದೆ. ಮೈಸೂರಿನ ಕುವೆಂಪು ನಗರದ E & F ಬ್ಲಾಕ್‍ ನಲ್ಲಿರುವ ಯೋಗ ಶಿಕ್ಷಕ ಸುರೇಶ್‍ ಚಂದ್ರ ಅವರ ಪುತ್ರ ಅಭಿಷೇಕ್‍ ಕೊಲೆಯಾಗಿರುವ ವಿದ್ಯಾರ್ಥಿ. ಅಭಿಷೇಕ್‍ ಕಳೆದ ಒಂದೂವರೆ ವರ್ಷದಿಂದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‍ ಸೈನ್ಸ್‍ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಜೊತೆಗೆ ಬಿಡುವಿನ ವೇಳೆಯಲ್ಲಿ ಹೋಟೆಲ್‍ ನಲ್ಲಿ ಕೆಲಸ ಮಾಡುತ್ತಿದ್ದನೆಂದು ಗೊತ್ತಾಗಿದೆ.

   ಗುರುವಾರ ರಾತ್ರಿ ಹೋಟೆಲ್‍ ಕೆಲಸ ಮುಗಿಸಿ ಹೊರಬಂದಾಗ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಅಭಿಷೇಕ್‍ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಗೊತ್ತಾಗಿದೆ. ಹೊಸ ವರ್ಷ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಯುವಕರು ಹೆಚ್ಚು ಪಾರ್ಟಿಗಳನ್ನು ಮಾಡುತ್ತಾರೆ. ಇಂತಹ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದವರೇ ಅಭಿಷೇಕ್‍ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಭಿಷೇಕ್‍ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

   ಸಂಸದ ಪ್ರತಾಪ್‍ ಸಿಂಹ ಅವರ ಮೂಲಕ ವಿದೇಶಾಂಗ ಸಚಿವರನ್ನು ಸಂಪರ್ಕಿಸಿರುವ ಅಭಿಷೇಕ್‍ ಕುಟುಂಬದ ಸದಸ್ಯರು, ಮೃತದೇಹವನ್ನು ಭಾರತಕ್ಕೆ ತರಲು ನೆರವು ಕೋರಿದ್ದಾರೆ.

ಮೃತನ ತಂದೆ ಸುರೇಶ್‍ ಚಂದ್ರ ಅವರು ಶ್ರೀ ಉಪನಿಷತ್‍ ಯೋಗಾ ಸೆಂಟರ್‍ ಟ್ರಸ್ಟ್‍ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಯೋಗಾ ಶಿಕ್ಷಕರಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು, ಮತ್ತೊಬ್ಬ ಪುತ್ರ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

 

%d bloggers like this: