You cannot copy content of this page.
. . .

ಅನರ್ಹತೆ ಎಂಬುದೇ ಕಳಂಕ – ರಮೇಶ್ ಕುಮಾರ್

   ಅನರ್ಹತೆ ಎಂಬುದೇ ಕಳಂಕ. ಅನರ್ಹರನ್ನು ಆಯ್ಕೆ ಮಾಡುವುದು ಬಿಡುವುದು ಮತದಾರರಿಗೆ ಬಿಟ್ಟ ವಿಚಾರ ಎಂದು ಮಾಜಿ ಸ್ಪೀಕರ್‍ ರಮೇಶ್‍ ಕುಮಾರ್‍ ಹೇಳಿದ್ದಾರೆ. ಸುಪ್ರೀಂ ಕೋರ್ಟ್‍ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಅವರು, ತೀರ್ಪು ನನಗೆ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.

   ನಾನು ಕಾನೂನಿನ ಅಡಿಯಲ್ಲಿಯೇ ಈ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಆದೇಶ ನೀಡಿದ್ದೆ. ಅನರ್ಹರು ಏನೇ ಆರೋಪ ಮಾಡಿದರೂ ಅದಕ್ಕೆ ನಾನು ಮನ್ನಣೆ ಕೊಡುವುದಿಲ್ಲ. ನಾನು ಯಾವುದೇ ಪಕ್ಷದ ಪರವಾಗಿ ಆದೇಶ ನೀಡಿಲ್ಲ ಎಂದು ರಮೇಶ್‍ ಕುಮಾರ್‍ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾರೆ.

 

%d bloggers like this: