
40 ಸಾವಿರ ಕೋಟಿ ಹಣ ರೂಪಾಯಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಕಳುಹಿಸುವುದಕ್ಕಾಗಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಇದು ಬರೀ ಸುಳ್ಳಾಗಿದ್ದು, ಕೇಂದ್ರ ಸರ್ಕಾರಕ್ಕೆ ಯಾವುದೇ ಹಣ ವಾಪಸ್ ನೀಡಿಲ್ಲ ಎಂದು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರಕ್ಕೆ ಯಾವುದೇ ಹಣ ಕಳಿಸಿಲ್ಲ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಭೂಸ್ವಾಧೀನದ ಕಾರ್ಯ ಹೊರತುಪಡಿಸಿ ಬೇರೆ ಯಾವುದೇ ಪಾತ್ರ ನಿರ್ವಹಿಸಿಲ್ಲ’ ಎಂದು ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದ್ದಾರೆ.
ಬಹುಮತ ಇಲ್ಲದೆ ಇದ್ದರೂ ಎನ್ಸಿಪಿಯ ಅಜಿತ್ ಪವಾರ್ ಜತೆ ಸೇರಿ ದೇವೇಂದ್ರ ಫಡ್ನವಿಸ್ ಅವರು ಸರ್ಕಾರ ರಚಿಸುವುದರ ಹಿಂದೆ ಮಹತ್ತರ ಉದ್ದೇಶವಿತ್ತು. ಬಳಕೆಯಾಗದೆ ಉಳಿದಿದ್ದ ನಿಧಿಯನ್ನು ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದವು, ಹೀಗಾಗಿ ಆ ಹಣವನ್ನು ಕೇಂದ್ರಕ್ಕೆ ಮರಳಿಸುವ ಉದ್ದೇಶದಿಂದಲೇ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ವಾಟ್ಸಾಪ್ ನಲ್ಲಿ ಬಂದಿದ್ದ ಸಂದೇಶವೊಂದನ್ನು ನಿಜವೆಂದು ನಂಬಿ ಅನಂತ್ ಕುಮಾರ್ ಹೆಗಡೆ ಈ ಹೇಳಿಕೆ ನೀಡಿದ್ದರು ಎಂದು ತಿಳಿದುಬಂದಿದೆ. ಅನಂತ್ ಕುಮಾರ್ ಈ ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆ ವಿಡಿಯೋದಲ್ಲಿ ಅನಂತ್ ಕುಮಾರ್ ಹೆಗ್ಡೆ ಏನು ಹೇಳಿದ್ದಾರೆ..? ಅದರ ಸಾರಾಶ ಇಲ್ಲಿದೆ.
